ವಿಶ್ವದ ಮೊದಲ ಬಿದಿರಿನ ರಸ್ತೆ ಬ್ಯಾರಿಯರ್ ಮಹಾರಾಷ್ಟ್ರ ಹೆದ್ದಾರಿಯಲ್ಲಿ ಸ್ಥಾಪನೆ

ನವದೆಹಲಿ: ‘ವಿಶ್ವದ ಮೊದಲ’ ಬಿದಿರು ಕ್ರ್ಯಾಶ್ ಬ್ಯಾರಿಯರ್ ಅನ್ನು ಮಹಾರಾಷ್ಟ್ರದ ಚಂದ್ರಾಪುರ ಮತ್ತು ಯವತ್ಮಾಲ್ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಸ್ಥಾಪಿಸಲಾಗಿದೆ. ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ವಾಣಿ-ವರೋರಾ ಹೆದ್ದಾರಿಯಲ್ಲಿ ಸ್ಥಾಪಿಸಲಾದ ವಿಶ್ವದ ಮೊದಲ 200 ಮೀಟರ್ ಉದ್ದದ ಬಿದಿರು ಕ್ರಾಶ್ ಬ್ಯಾರಿಯರ್‌ ಅಭಿವೃದ್ಧಿಯೊಂದಿಗೆ ಆತ್ಮನಿರ್ಭರ ಭಾರತವನ್ನು ಸಾಧಿಸುವ ನಿಟ್ಟಿನಲ್ಲಿ ಅಸಾಧಾರಣ ಸಾಧನೆ ಮಾಡಲಾಗಿದ್ದು, ಇದು ದೇಶ ಮತ್ತು ಬಿದಿರು ವಲಯಕ್ಕೆ ‘ಅದ್ಭುತ ಸಾಧನೆ’ ಎಂದಿದ್ದಾರೆ.

ಇನ್ನು ಈ ಬಿದಿರಿನ ಕುಸಿತ ತಡೆಗೋಡೆಗೆ ‘ಬಹು ಬಲ್ಲಿ’ ಎಂದು ನಾಮಕರಣ ಮಾಡಲಾಗಿದ್ದು, ಬಿದಿರಿನ ತಡೆಗೋಡೆಗಳ ಮರುಬಳಕೆ ಮೌಲ್ಯವು 50-70 ಪ್ರತಿಶತದಷ್ಟಿದ್ದರೆ, ಉಕ್ಕಿನ ತಡೆಗೋಡೆಗಳ ಮೌಲ್ಯವು 30-50 ಪ್ರತಿಶತ ಎಂದು ಗಡ್ಕರಿ ಹೇಳಿದ್ದಾರೆ.

You cannot copy content from Baravanige News

Scroll to Top