ಉಗ್ರರಿಗೆ ಹಣಕಾಸಿನ ನೆರವು; ದ.ಕ ಹಲವೆಡೆ ಎನ್ ಐ ಎ ದಾಳಿ

ಪ್ರಧಾನಿ ನರೇಂದ್ರ ಮೋದಿಯವರ ಬಿಹಾರದ ಪಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಂಬ್ ಇರಿಸಲು ಯತ್ನಿಸಿ ಬಂಧಿತರಾದ ಉಗ್ರರಿಗೆ ಹಣಕಾಸಿನ ನೆರವು ನೀಡಿರುವ ವಿಚಾರಕ್ಕೆ ಸಂಬಂಧಿಸಿ ಎನ್ ಐ ಎ ಭಾನುವರ ಸಂಜೆ ಬಂಟ್ವಾಳ, ಪುತ್ತೂರಿನಲ್ಲಿ ಹಲವು ಮನೆಗಳಿಗೆ ದಾಳಿ ನಡೆಸಿದೆ.

ಪಾಟ್ನಾ ದ ಕಾರ್ಯಕ್ರಮವನ್ನು ವಿಫಲಗೊಳಿಸಬೇಕು ಎಂಬ ನಿಟ್ಟಿನಲ್ಲಿ ಬಾಂಬ್ ಇಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕಾಸಿನ ನೆರವು ಒದಗಿಸಿದ ಬಂಟ್ವಾಳ ಮ‌ೂಲದ ನಾಲ್ವರು ಆರೋಪಿಗಳ ಮನೆಗೆ ಎನ್.ಐ.ಎ ತಂಡ ದಾಳಿ ನಡೆಸಿ ತನಿಖೆ ನಡೆಸುತ್ತಿದೆ.

ನಂದಾವರ ನಿವಾಸಿಗಳಾದ ಮಹಮ್ಮದ್ ಸಿನಾನ್, ಇಕ್ಬಾಲ್, ಸರ್ಪಾಜ್ ನವಾಜ್, ನೌಫಲ್ ಮನೆಗೆ ದಾಳಿ ನಡೆದಿದ್ದು, ಈ ಅರೋಪಿಗಳು ಪಾಟ್ನಾ ದ ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಭಯೋತ್ಪಾದಕ ರ ಜೊತೆ ಸಂಪರ್ಕ ಹೊಂದಿ ಹಣಕಾಸಿನ ನೆರವು ಒದಗಿಸಿದ್ದಾರೆ ಎಂಬ ಆರೋಪದಲ್ಲಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.

ಈ ಕೃತ್ಯಕ್ಕೆ ಸಂಬಂಧಿಸಿದಂತೆ ಭಯೋತ್ಪಾದಕರ ವಿವಿಧ ಖಾತೆಗಳಿಗೆ ಕೋಟ್ಯಾಂತರ ರೂಪಾಯಿ ಹಣದ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಇವರ ಮೇಲಿದೆ ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಎನ್.ಐ.ಎ ತಂಡ ಇಂದು ಸಂಜೆ ವೇಳೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ.

You cannot copy content from Baravanige News

Scroll to Top