ಶಿರ್ವ: ಪದವು ಮೈದಾನದ ಬಳಿ ಬೆಂಕಿ : ಮರ ಗಿಡಗಳು ಬೆಂಕಿಗಾಹುತಿ

ಶಿರ್ವ (ಮಾ.6) : ಗ್ರಾ.ಪಂ.ವ್ಯಾಪ್ತಿಯ ಪದವು ಎಂಎಸ್ ಆರ್ ಎಸ್ ಕಾಲೇಜಿನ ಸಮೀಪದ ಮೈದಾನದ ಬಳಿ ರವಿವಾರ ಸಂಜೆಯ ವೇಳೆ ಬೆಂಕಿ ಬಿದ್ದು ಮರ ಗಿಡಗಳು ಸುಟ್ಟು ಹೋಗಿದ್ದು ಹಾನಿ ಸಂಭವಿಸಿದೆ.

ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಯುವಕರ ತಂಡ ಸಣ್ಣ ಪ್ರಮಾಣದಲ್ಲಿದ್ದ ಬೆಂಕಿಯನ್ನು ನಂದಿಸಲು ಕಡೆಗಣಿಸಿ ತೆರಳಿದ್ದು ಬೆಂಕಿ ವ್ಯಾಪಕವಾಗಿ ಹರಡಿ ಹಾನಿಯಾಗಿದೆ.

ಶಿರ್ವ ಪೊಲೀಸ್ ಎಎಸ್ಐಗಳಾದ ವಿವೇಕಾನಂದ, ಶ್ರೀಧರ್ ಕೆ.ಜೆ,ಹೆಡ್ ಕಾನ್ ಸ್ಟೇಬಲ್ ಗಳಾದ ಜ್ಯೋತಿ, ಭಾಸ್ಕರ್, ಧರ್ಮ , ಮುದರಂಗಡಿ ಗ್ರಾಮ ಪಂ.ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜಾ ಮತ್ತು ಸ್ಥಳೀಯರಾದ ಶೈಲೇಶ್ ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಯುಪಿಸಿಎಲ್ ಅದಾನಿಯ ಅಗ್ನಿಶಾಮಕ ದಳದ ತಂಡ ಮತ್ತು ಉಡುಪಿಯ ಅಗ್ನಿಶಾಮಕ ದಳದ ಅಧಿಕಾರಿ ಹೆಚ್ ಎಂ. ವಸಂತ್ ನೇತೃತ್ವದ ತಂಡದಿಂದ ಬೆಂಕಿಯನ್ನು ನಂದಿಸುವ ಕಾರ್ಯ ನಡೆಸಿದೆ ಎಂದು ವರದಿಯಾಗಿದೆ..

You cannot copy content from Baravanige News

Scroll to Top