ಕೊಯಮತ್ತೂರು ಕಾರು ಸ್ಫೋಟ ಮತ್ತು ಮಂಗಳೂರು ಆಟೋ ರಿಕ್ಷಾ ಕುಕ್ಕರ್ ಸ್ಫೋಟದ ಹೊಣೆಯನ್ನ ISKP ಉಗ್ರ ಸಂಘಟನೆ ಹೊತ್ತುಕೊಂಡಿದೆ.
ಇಸ್ಲಾಮಿಕ್ ಸ್ಟೇಟ್ ಖೊರಸಾನ್ ಪ್ರಾವಿನ್ಸ್ ಎಂಬ ಉಗ್ರ ಸಂಘಟನೆಯು ಈ ಎರಡೂ ದಾಳಿಯನ್ನು ನಡೆಸಿದ್ದು ನಮ್ಮವರೇ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ದಕ್ಷಿಣ ಭಾರತದಲ್ಲಿ ಈಗಲೂ
ಇಸ್ಲಾಮಿಕ್ ಸ್ಟೇಟ್ ಉಗ್ರರು ಸಕ್ರಿಯರಾಗಿದ್ದಾರೆ ಎಂದು ಎಚ್ಚರಿಸಿದ್ದಾರೆ.
2022ರ ಅಕ್ಟೋಬರ್ 23 ರಂದು ಕೊಯಮತ್ತೂರಿನ ಕಾರಿನಲ್ಲಿ ಸ್ಫೋಟ ಸಂಭವಿಸಿತ್ತು. ಅದಾದ ಬಳಿಕ ನವೆಂಬರ್ 19, 2022 ರಂದು ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟ ಸಂಭವಿಸಿತ್ತು.
ಕೊಯಮತ್ತೂರು, ಮಂಗಳೂರು ಈ ಬ್ಲಾಸ್‌ನಲ್ಲೂ ನಮ್ಮದೇ ಕೈವಾಡವಿದೆ. ನಮ್ಮವರು ನಮ್ಮ ಧರ್ಮದ ಗೌರವಕ್ಕಾಗಿ ಸೇಡು ತೀರಿಸಿಕೊಂಡರು ಎಂದು ಇಸ್ಲಾಮಿಕ್ ಸ್ಟೇಟ್ ಖೊರಸಾನ್ ಪ್ರಾವಿನ್ಸ್ ಉಗ್ರ ಸಂಘಟನೆ ಪ್ರಕಟಿಸಿಕೊಂಡಿದೆ.
ಇಸ್ಲಾಮಿಕ್ ಸ್ಟೇಟ್ ಖೊರಸಾನ್ ಪ್ರಾವಿನ್ಸ್ ಉಗ್ರ ಸಂಘಟನೆ ಇಂತಹದೊಂದು ಪ್ರಕಟಣೆ ಹೊರಡಿಸಿದೆ. ತನ್ನ ಮುಖವಾಣಿ ವಾಯ್ಸ್ ಆಫ್ ಖುರಸಾನ್ ಮ್ಯಾಗಝೀನ್‌ನಲ್ಲಿ ಈ ರೀತಿ ಉಲ್ಲೇಖ ಮಾಡಲಾಗಿದೆ ಎಂದು ಇಂಡಿಯಾ ಟುಡೇ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರರಿಂದಲೇ ಕೊಯಮತ್ತೂರಿನಲ್ಲಿ ಕಾರ್ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಇಸ್ಲಾಂ ಧರ್ಮ ಸ್ಥಾಪನೆಗಾಗಿ ದಕ್ಷಿಣ
ಭಾರತದಲ್ಲೇ ಇಸ್ಲಾಮಿಕ್ ಸ್ಟೇಟ್‌ನ ಉಗ್ರರು ಸಕ್ರಿಯರಾಗಿದ್ದಾರೆ ಅನ್ನೋದು ಈ ವರದಿಯಲ್ಲಿ ದಾಖಲಿಸಲಾಗಿದೆ. ಈ ಮೂಲಕ ದಕ್ಷಿಣ ಭಾರತದ ಮೇಲೆ ಮತ್ತೊಮ್ಮೆ ಉಗ್ರರ ಕರಿನೆರಳು ಬಿದ್ದಿರೋದು ಆತಂಕಕಾರಿಯಾದ ವಿಷಯವಾಗಿದೆ.