ತನ್ನ ಮಕ್ಕಳಿಗೆ ‘ಸೈನ್ಯ’ ‘ಶೌರ್ಯ’ ಎಂದು ಹೆಸರಿಟ್ಟ ಉಡುಪಿಯ ಯೋಧ : ಹೀಗೊಂದು ದೇಶಪ್ರೇಮ

ಉಡುಪಿ: ಜಿಲ್ಲೆಯ ಹೆಬ್ರಿ ತಾಲೂಕಿನ ಚಾರ ಗ್ರಾಮದ ಯೋಧ ಪ್ರಶಾಂತ್ ಪೂಜಾರಿ ಮತ್ತೊಮ್ಮೆ ದೇಶ ಪ್ರೇಮ ಸಾರಿದ್ದಾರೆ.

ಈ ಹಿಂದೆ ತಮ್ಮ ಮೊದಲ ಮಗುವಿಗೆ ಸೈನ್ಯ ಎಂಬ ಪ್ರಶಂಸಾರ್ಹ ಹೆಸರಿಟ್ಟಿದ್ದ ಯೋಧ ಪ್ರಶಾಂತ್-ಆಶಾ ದಂಪತಿ ಇದೀಗ ಎರಡನೇ ಮಗುವಿಗೆ ಶೌರ್ಯ ಎಂದು ನಾಮಕರಣ ಮಾಡಿದ್ದಾರೆ. ಆ ಮೂಲಕ ಪ್ರಶಾಂತ್ ದೇಶದ ಮೇಲಿನ ಪ್ರೀತಿ, ಅಭಿಮಾನ, ಗೌರವವನ್ನು ವ್ಯಕ್ತಪಡಿಸಿದ್ದಾರೆ.

ಎರಡೂವರೆ ವರ್ಷಗಳ ಹಿಂದೆ, ಅಂದರೆ 2020ರ ಅಕ್ಟೋಬರ್ ತಿಂಗಳಲ್ಲಿ ಪ್ರಶಾಂತ್ ಆಶಾ ದಂಪತಿ ತಮ್ಮ ಮೊದಲ ಹೆಣ್ಣು ಮಗುವಿಗೆ ಸೈನ್ಯ ಎಂಬ ನಾಮಕರಣ ಮಾಡುವ ಮೂಲಕ ಸುದ್ದಿಯಾಗಿದ್ದರು. ಅಲ್ಲದೆ, ಪ್ರಶಂಸೆಗೂ ಪಾತ್ರರಾಗಿದ್ದರು.

ಇದೀಗ 2ನೇ ಮಗುವಾದ ಗಂಡು ಮಗುವಿಗೆ ಸೈನ್ಯದಲ್ಲಿ ಯೋಧರು ತೋರುವ ಶೌರ್ಯದ ಸಂಕೇತವಾಗಿ ಶೌರ್ಯ ಎಂದು ಹೆಸರಿಟ್ಟಿದ್ದಾರೆ. ಆ ಮೂಲಕ ಭಾರತದ ಸೈನ್ಯಕ್ಕೆ ಹಾಗೂ ಸೈನಿಕರ ಶೌರ್ಯಕ್ಕೆ ಗೌರವೂ ಸಲ್ಲಿಸಿದ್ದಾರೆ. ಪ್ರಸ್ತುತ ಪ್ರಶಾಂತ್ ಅವರು ಜಮ್ಮುವಿನಲ್ಲಿ ದೇಶಸೇವೆ ಮಾಡುತ್ತಿದ್ದಾರೆ.

You cannot copy content from Baravanige News

Scroll to Top