ಉಡುಪಿ: ಫೇಸ್ ಬುಕ್ ಜಾಹಿರಾತಿನಿಂದ ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂ. ವಂಚನೆ

ಉಡುಪಿ: ಬಜಾಜ್ ಫೈನಾನ್ಸ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಂದ ಅಪರಿಚಿತ ವ್ಯಕ್ತಿಗಳು ಆನೈನ್ ಮೂಲಕ 4.09 ಲಕ್ಷ ರೂ. ದೋಚಿರುವ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಹಣ ಕಳೆದುಕೊಂಡ ಕಾಪು ಕುಂಜೂರಿನ ನಿವಾಸಿ ಗಿರೀಶ್ ಆಚಾರ್ಯ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರು ಹಣದ ಅವಶ್ಯಕತೆಗಾಗಿ ಫೇಸ್ ಬುಕ್ ನಲ್ಲಿ ಕಂಡು ಬಂದ ಬಜಾಜ್ ಲೋನ್ ಎಂಬ ಜಾಹಿರಾತಿನಲ್ಲಿ ಲೋನ್ ಪಡೆಯುವ ಬಗ್ಗೆ ದಾಖಲೆಗಳನ್ನು ಆನ್ ಲೈನ್ ಮುಖೇನ ಅಪ್‌ಲೋಡ್ ಮಾಡಿದ್ದರು.

ಬಳಿಕ ಫೆ.27 ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ, ತಾನು ಬಜಾಜ್ ಫೈನಾನ್ಸ್ ನ ಕಡೆಯವನು ಎಂಬುದಾಗಿ ಹೇಳಿ ಲೋನ್ ನೀಡುವುದಾಗಿ ನಂಬಿಸಿದ್ದನು. ಅಲ್ಲದೆ ಲೋನ್ ನೀಡಲು ಜಾರ್ಜ್ ಎಂದು ಹೇಳಿ ಗಿರೀಶ್ ಆಚಾರ್ಯ ಅವರ ಖಾತೆಯಿಂದ ಮಾ.1 ರಿಂದ ಮಾ.3 ರ ವರೆಗೆ ಹಂತ ಹಂತವಾಗಿ ಒಟ್ಟು 4,09,167 ರೂ. ಹಣವನ್ನು ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಿಕೊಂಡು ಲೋನ್ ನ್ನು ನೀಡದೇ, ಪಡೆದ ಹಣವನ್ನು ವಾಪಾಸು ನೀಡದೇ ವಂಚಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top