ವಾಯುಪಡೆ ಇತಿಹಾಸದಲ್ಲೇ ಮೊದಲ ಬಾರಿ ಯುದ್ದ ಘಟಕದ ಮಹಿಳಾ ಕಮಾಂಡರ್ ಆಗಿ ಶಾಲಿಜಾ ನೇಮಕ

ನವದೆಹಲಿ: ವಾಯುಪಡೆಯ ಇತಿಹಾಸದಲ್ಲೇ ಮುಂಚೂಣಿ ಯುದ್ದ ಘಟಕಕ್ಕೆ ಮಹಿಳಾ ಕಮಾಂಡ್‌ರನ್ನು ನಿಯೋಜನೆ ಮಾಡಲಾಗಿದೆ.

ಭಾರತೀಯ ವಾಯುಪಡೆಯು ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು ಪಶ್ಚಿಮ ವಲಯದ ಮುಂಚೂಣಿ ಯುದ್ಧ ಘಟಕದ ಕಮಾಂಡ್ ಆಗಿ ನಿಯೋಜನೆಗೊಂಡಿದ್ದಾರೆ. ಕ್ಷಿಪಣಿ ಸ್ಕ್ವಾಡ್ರನ್‌ನ ನೇತೃತ್ವವನ್ನು ಶಾಲಿಜಾ ವಹಿಸಿಕೊಳ್ಳಲಿದ್ದಾರೆ. 2003ರಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿ ನಿಯೋಜನೆಗೊಂಡಿದ್ದ ಧಾಮಿ ಅವರು 2,800 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ.

ಸೇನೆಯು ವೈದ್ಯಕೀಯ ವಿಭಾಗದಾಚೆಗೂ ಕಮಾಂಡ್ ಹುದ್ದೆಗಳಿಗೆ ಮಹಿಳಾ ಅಧಿಕಾರಿಗಳನ್ನು ನಿಯೋಜನೆ ಮಾಡುವ ಪ್ರಕ್ರಿಯೆಯನ್ನು ಈ ತಿಂಗಳಾರಂಭದಿಂದ ಪ್ರಾರಂಭ ಮಾಡಿದೆ. ಪಶ್ಚಿಮ ವಲಯದಲ್ಲಿ ಹೆಲಿಕಾಪ್ಟರ್ ಘಟಕದ ಫ್ಲೈಟ್ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ. ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಅವರಿಂದ ಎರಡು ಬಾರಿ ಶ್ಲಾಘನೆಗೆ ಒಳಗಾಗಿದ್ದಾರೆ.

You cannot copy content from Baravanige News

Scroll to Top