ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜರು ಎನ್ನುವ ಮಿಥುನ್ ರೈ ಹೇಳಿಕೆಗೆ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿರುಗೇಟು

ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜರು, ಎಂಬ ಮಿಥುನ್ ರೈ ಹೇಳಿಕೆಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ತಿರುಗೇಟು ಕೊಟ್ಟಿದ್ದಾರೆ. ‘ಯಾರೇ, ಯಾವ ಹೇಳಿಕೆಯನ್ನ ಕೊಡಬಹುದು. ಆದರೆ ಅಂತಹ ಹೇಳಿಕೆಯನ್ನ ಕೊಡಬೇಕು ಅಂತಾದರೆ ಅದಕ್ಕೆ ಯುಕ್ತವಾದ ಆಧಾರವನ್ನ ಕೊಟ್ಟರೆ ಮಾತ್ರ ಆ ಮಾತಿಗೆ ಬೆಲೆ ಇರುತ್ತದೆ. ಆದರೆ ಆಧಾರ ರಹಿತವಾದ ಹೇಳಿಕೆ ಇಟ್ಟುಕೊಂಡು ಚರ್ಚಿಸಿದರೆ ಅದಕ್ಕೆ ಅರ್ಥವಿಲ್ಲ. ಕೃಷ್ಣ ಮಠಕ್ಕೆ ರಾಮಭೋಜ ಅರಸ ಜಾಗ ಕೊಟ್ಟಿದ್ದಕ್ಕೆ ಆಧಾರಗಳಿವೆ, ಗುರುಗಳ ಹೇಳಿಕೆಯನ್ನು ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ತುಮಕೂರಿನಲ್ಲಿ ಪೇಜಾವರ ಶ್ರೀ ಹೇಳಿದ್ದಾರೆ.

ಮಧ್ವಾಚಾರ್ಯರು ಎಲ್ಲ ಶಿಷ್ಯರೊಡನೆ ಸೇರಿಕೊಂಡು ಬದ್ರಿ ಯಾತ್ರೆಗೆ ಹೊರಟಿದ್ರು. ಹಾಗೆ ಯಾತ್ರೆಗೆ ಹೋಗುವಾಗ ಗಂಗಾ ನದಿಯನ್ನ ದಾಟಬೇಕಿತ್ತು. ಅಲ್ಲೊಬ್ಬ ತುರ್ಕರ ರಾಜ ಆಳ್ವಿಕೆ ಮಾಡುತ್ತಿದ್ದನು. ನದಿ ದಾಟಲಿಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನ ಆತ ನಿಲ್ಲಿಸಿದ್ದ. ಆಗ ಮಧ್ವಾಚಾರ್ಯರು ಗಂಗಾ ನದಿಯನ್ನ ಈಜಿಯೇ ದಾಟಲು ಮುಂದಾದರು. ಬಳಿಕ ಶಿಷ್ಯರಿಗೆ ತಮ್ಮ ಕಾಲನ್ನ ಹಿಡಿದುಕೊಳ್ಳಲು ಹೇಳಿದರು. ಆಗ ತುರ್ಕ ರಾಜನ ಸೈನಿಕರು ಇವರತ್ತ ಓಡಿಬಂದರು. ಆದರೆ ಮಧ್ವಾಚಾರ್ಯರು ಸ್ವಲ್ಪವೂ ಹೆದರದೇ ಅವರಿಗೆ ತಿಳಿ ಹೇಳಿದರು. ಆಗ ಆಚಾರ್ಯರ ವ್ಯಕ್ತಿತ್ವವನ್ನ ಕಂಡು ಆ ರಾಜ ಅಲ್ಲಿನ ಅರ್ಧ ರಾಜ್ಯವನ್ನ ದಾನ ಮಾಡುತ್ತಾನೆ. ಅದನ್ನ ನಮ್ಮ ಗುರುಗಳು ಉಲ್ಲೇಖ ಮಾಡಿದ್ದಾರೆ ಹೊರತು, ಉಡುಪಿ ಮಠದ ಜಾಗವನ್ನ ಮುಸ್ಲಿಂ ರಾಜರು ನೀಡಿದ್ದು ಎಂದು ಹೇಳಿದ್ದಲ್ಲ. ಈ ಗೊಂದಲದಿಂದ ಅವರು ಈ ರೀತಿಯ ಹೇಳಿಕೆ ಕೊಟ್ಟಿರಬಹುದು. ಆದ್ರೆ ಅದು ಆಧಾರ ರಹಿತವಾಗಿರೋದ್ರಿಂದ ಈ ಚರ್ಚೆಯನ್ನ ಮುಂದುವರಿಸೋದು ಅರ್ಥಹೀನ ಎಂಬುದು ನನ್ನ ಅನಿಸಿಕೆ ಎಂದಿದ್ದಾರೆ.

ಮಿಥುನ್ ರೈ ಅವರು ಗೊಂದಲದಿಂದ ಈ ರೀತಿಯ ಹೇಳಿಕೆ
ಕೊಟ್ಟಿರಬಹುದು. ಆದರೆ ಅದು ಆಧಾರ ರಹಿತವಾಗಿರೋದ್ರಿಂದ
ಈ ಚರ್ಚೆಯನ್ನ ಮುಂದುವರಿಸೋದು ಅರ್ಥಹೀನ ಅನ್ನೋದು ನನ್ನ ಅನಿಸಿಕೆ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ
ತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

Scroll to Top