ದ್ವಿತೀಯ ಪಿಯುಸಿ ಪರೀಕ್ಷೆ : ಮೊದಲ ದಿನ ದ.ಕ-242, ಉಡುಪಿ-91 ವಿದ್ಯಾರ್ಥಿಗಳು ಗೈರು

ಉಡುಪಿ: ಇಂದು ರಾಜ್ಯಾದ್ಯಂತ ಆರಂಭಗೊಂಡಿರುವ ದ್ವಿತೀಯ
ಪಿಯುಸಿ ಪರೀಕ್ಷೆಯ ಮೊದಲ ದಿನದ ಪರೀಕ್ಷೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ.

ಉಡುಪಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನವಾದ ಇಂದು ವಿದ್ಯಾರ್ಥಿಗಳು ಶಿಸ್ತಿನಿಂದ ಕಾಲೇಜಿಗೆ ಹಾಜರಾಗಿ ಪರೀಕ್ಷೆ ಬರೆದಿದ್ದು, ಯಾವುದೇ ಆಹಿತಕರ ಘಟನೆಗಳು ಗೊಂದಲಗಳು ಇಲ್ಲದೆ ಯಶಸ್ವಿಯಾಗಿ ಪರೀಕ್ಷೆ ನಡೆಯಿತು.

ಇಂದು ಕನ್ನಡ ಮತ್ತು ಅರೇಬಿಕ್ ಭಾಷೆಯ ಪರೀಕ್ಷೆಗಳು ನಡೆದಿದ್ದು ಕನ್ನಡ ಪರೀಕ್ಷೆ ಬರೆಯಲು 8,833 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 8,742 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

91 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಅರೇಬಿಕ್ ಪರೀಕ್ಷೆಯನ್ನು ಬರೆಯಲು ಯಾವುದೇ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ದಿನದ ಕನ್ನಡ ಪರೀಕ್ಷೆ ಬರೆಯಲು ದಾಖಲಿಸಿಕೊಂಡ 19,385 ಫ್ರೆಶರ್ ವಿದ್ಯಾರ್ಥಿಗಳ ಪೈಕಿ 19,169 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 216 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಹಾಗೂ ಕನ್ನಡ ಪರೀಕ್ಷೆ ಬರೆದ 120 ಮಂದಿ ರಿಪಿಟರ್ಸ್ ವಿದ್ಯಾರ್ಥಿಗಳಲ್ಲಿ 94
ಮಂದಿ ಪರೀಕ್ಷೆ ಹಾಜರಾಗಿದ್ದು, 26 ಮಂದಿ ಗೈರಾಗಿದ್ದಾರೆ. ಇನ್ನು ಅರೇಬಿಕ್ ಪರೀಕ್ಷೆಯನ್ನು ಬರೆಯಲು ದಾಖಲಿಸಿಕೊಂಡ 134 ವಿದ್ಯಾರ್ಥಿಗಳು ಎಲ್ಲರೂ ಪರೀಕ್ಷೆ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

Scroll to Top