ಉಡುಪಿ: ಮಲ್ಪೆ ಬೀಚ್‌ನಲ್ಲಿ ಮೂತ್ರ ಮಾಡಲು ಕೂಡಾ 10 ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಬಂದೊದಗಿದ್ದು, ಇದರ ಟಿಕೆಟ್ ಪೊಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಲ್ಪೆಯಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಬಳಕೆ ಮಾಡಿರುವ ಸಾರ್ವಜನಿಕರೊಬ್ಬರು ಈ ರಶೀದಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದೀಗ ಟ್ರೋಲ್ ಆಗುತ್ತಿದೆ.
ಇನ್ನು ಈ ಕುರಿತು ಶುಕ್ರವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ವಿಪಕ್ಷ ನಾಯಕ ರಮೇಶ್ ಕಾಂಚನ್ ಪ್ರಶ್ನೆಗೆ ಉತ್ತರಿಸಿದ ಶಾಸಕ ರಘುಪತಿ ಭಟ್ ಅವರು ಈ ಕುರಿತು ಈಗಾಗಲೇ ಮಂತ್ರ ಟೂರಿಸಂ ಡೆವಲಪ್ಮೆಂಟ್ ಕಂಪನಿ ಯವರ ಬಳಿ ಸ್ವಷ್ಟನೆ ಕೇಳಿದ್ದು ಮೂತ್ರ ವಿಸರ್ಜನೆ ಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ, ಕೇವಲ ಸ್ನಾನ ಗ್ರಹ ಬಳಕೆಗೆ ಮಾತ್ರ 10 ರುಪಾಯಿ ಶುಲ್ಕ ಪಡೆಯಲಾಗುತ್ತಿದೆ ಎಂದರು.