ಭಾರತದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಗೆ ಒಲಿದು ಬಂದ ಆಸ್ಕರ್

ನವದೆಹಲಿ: ಭಾರತದ ‘ದಿ ಎಲಿಫೆಂಟ್ ವಿಸ್ಪರರ್ಸ್ ‘ಸಾಕ್ಷ್ಯಚಿತ್ರವು ಆಸ್ಕರ್ ಪ್ರಶಸ್ತಿ ತನ್ನದಾಗಿಸಿಕೊಂಡು ಇತಿಹಾಸ ಬರೆದಿದೆ.

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ Best Documentary Short Subject ವಿಭಾಗದಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್’ (The Elephant Whisperers) ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಈ ಸಾಕ್ಷ್ಯಚಿತ್ರವನ್ನು ಕಾರ್ತಿಕಿ ಗೋನ್ಸಲ್ವೆಸ್‌ ಅವರು ನಿರ್ದೇಶನ ಮಾಡಿದ್ದು, ಗುನೀತ್ ಮೊಂಗಾ ನಿರ್ಮಿಸಿದ್ದಾರೆ.

‘ದಿ ಎಲಿಫೆಂಟ್ ವಿಸ್ಪರರ್ಸ್’ ಒಂದು ಕಿರು ಸಾಕ್ಷ್ಯಚಿತ್ರವಾಗಿದ್ದು, ಅನಾಥ ಆನೆ ರಘುವನ್ನು ನೋಡಿಕೊಳ್ಳುವ ದಂಪತಿಗಳ ಹೃದಯಸ್ಪರ್ಶಿ ಕಥೆಯ ಕುರಿತಾಗಿದೆ. ಆನೆ ರಘುವಿನ ಚೇತರಿಕೆಯ ನಡುವೆ ದಂಪತಿಗಳು ಮತ್ತು ರಘು ನಡುವಿನ ಪ್ರೀತಿ ಮತ್ತು ಬಾಂಧವ್ಯದ ಸುಂದರವಾದ ಕಥೆಯನ್ನು ಹೇಳುತ್ತದೆ.

Scroll to Top