ಪಡುಬಿದ್ರಿ: ಬಸ್ ಟೈಮಿಂಗ್ ವಿಚಾರದಲ್ಲಿ ಬಸ್ ನಿರ್ವಾಹಕ ಮತ್ತು ಟೈಂ ಕೀಪರ್ ರಸ್ತೆ ನಡುವೆಯೇ ಗಲಾಟೆ ಮಾಡಿಕೊಂಡ ಘಟನೆ ರವಿವಾರ ಮಧ್ಯಾಹ್ನ ಪಡುಬಿದ್ರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕುಂದಾಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಗಣೇಶ್ ಎಕ್ಸ್‌ಪ್ರೆಸ್ ಬಸ್ ಪಡುಬಿದ್ರಿ ನಿಲ್ದಾಣಕ್ಕೆ ಬಂದಾಗ ಟೈಮಿಂಗ್ ವಿಚಾರದಲ್ಲಿ ಬಸ್‌ನ ನಿರ್ವಾಹಕ ಸಮೀವುಲ್ಲಾ ಎಂಬಾತನಿಗೆ ಟೈಂ ಕೀಪರ್ ಮಹೇಶ್ ಎಂಬಾತ ಬೈಯ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ.
ಇದಕ್ಕೆ ಪ್ರತಿಯಾಗಿ ಟೈಂ ಕೀಪರ್ ಮಹೇಶ್ ಎಂಬಾತ ಪ್ರತಿದೂರು ನೀಡಿದ್ದು, ಟೈಂ ಕೀಪರ್ ತಾನು ಟೈಮಿಂಗ್ ವಿಚಾರದಲ್ಲಿ ಬೇಗ ಹೋಗುವಂತೆ ತಿಳಿಸಿದಾಗ ನಿರ್ವಾಹಕ ಸಮೀವುಲ್ಲಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೈಯ್ದು, ಹೊಡೆದು, ಜೀವ ಬೆದರಿಕೆ ಒಡ್ಡಿರುವುದಾಗಿ ದೂರು ನೀಡಿದ್ದಾನೆ.
ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.