ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಪ್ರಿಯಕರನಿಗೆ ಬಿಸಿ ಎಣ್ಣೆ ಎರಚಿದ ಪ್ರೇಯಸಿ ; ಯುವಕ ಗಂಭೀರ

ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಪ್ರಿಯಕರನ ಮೈ ಮೇಲೆ ಪ್ರೇಯಸಿ ಕುದಿಯುವ ಎಣ್ಣೆ ಎರಚಿದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಯುವಕ ಗಂಭೀರ ಗಾಯಗೊಂಡಿದ್ದಾನೆ.

ಕಾರ್ತಿ (27) ಗಾಯಗೊಂಡ ಯುವಕ.

ಮೀನಾ ದೇವಿ ಕೃತ್ಯ ಎಸಗಿದಾಕೆ. ಪೆರುಂತುರೈನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿ ಹಾಗೂ ಮೀನಾ ಸಂಬಂಧಿಗಳಾಗಿದ್ದು, ಹಲವು ಸಮಯದಿಂದ ಪ್ರೀತಿಸುತ್ತಿದ್ದರು. ಅಲ್ಲದೆ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆದರೆ ಕೆಲ ದಿನಗಳ ಹಿಂದೆ ಆತನ ಬೇರೆ ಯುವತಿಯೊಂದಿಗೆ ವಿವಾಹ ನಿಶ್ಚಯ ಮಾಡಿಕೊಂಡಿದ್ದ. ಈ ವಿಚಾರವನ್ನು ತಿಳಿಸುವುದಕ್ಕೆಂದು ಆತ ಮೀನಾದೇವಿಯ ಮನೆಗೆ ಬಂದಿದ್ದ. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಕೋಪಗೊಂಡ ಮೀನಾದೇವಿ ಕುದಿಯುತ್ತಿದ್ದ ಬಿಸಿ ಎಣ್ಣೆಯನ್ನು ಆತನ ಮೈ ಮೇಲೆ ಎಸೆದಿದ್ದಾಳೆ.

ಬಿಸಿ ಎಣ್ಣೆ ಬಿದ್ದ ಕೂಡಲೇ ಕಾರ್ತಿ ಕಿರುಚಾಡಿದ್ದು, ನೆರೆ ಹೊರೆಯವರು ಓಡಿ ಬಂದು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಘಟನೆ ಸಂಬಂಧ ಮೀನಾ ದೇವಿಯನ್ನು ಪೊಲೀಸರು ಬಂಧಿಸಿದ್ದು, ಆಕೆಯ ವಿರುದ್ದ ಕೊಲೆಯತ್ನ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

You cannot copy content from Baravanige News

Scroll to Top