ಉಡುಪಿ: ರಾಜ್ಯ ವಿಧಾನಸಭಾ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆ, ಮತದಾರರನ್ನು ಸೆಳೆಯಲು ನಕಲಿ/ ಕಳಪೆ ಮಟ್ಟದ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿಗಳನ್ನು ತಯಾರಿಸಿ, ಸಾಗಾಣಿಕೆ ಹಾಗೂ ಶೇಖರಣೆ ಮಾಡಿ, ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿತರಿಸುವ ಸಾಧ್ಯತೆ ಇದ್ದು, ಇದನ್ನು ಸೇವನೆ ಮಾಡಿದವರಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು ಹಾಗೂ ಕೆಲವು ಸಮಾಜಘಾತುಕರು ಅಕ್ರಮವಾಗಿ ಆದಾಯ ಗಳಿಸಲು ತೆರಿಗೆ ಪಾವತಿಸಿರುವ ಮದ್ಯವನ್ನು ಖರೀದಿಸಿ, ದಾಸ್ತಾನುಇಟ್ಟು, ಅದನ್ನು ಚುನಾವಣೆಯ ಡ್ರೈ ಡೇ ದಿನಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಾಧ್ಯತೆ ಇರುವುದರಿಂದ ಇಂತಹ ಕಾರ್ಯಗಳನ್ನು ತಡೆಗಟ್ಟಿ ಅಂತಹವರ ವಿರುದ್ಧಅಬಕಾರಿ ಇಲಾಖೆ ವತಿಯಿಂದಕಠಿಣಕಾನೂನು ಕ್ರಮ ಕೈಗೊಳ್ಳಲಾಗುವುದು.
ಅಬಕಾರಿ ಅಕ್ರಮಗಳನ್ನು ತಡೆಗಟ್ಟಿ, ಜಾರಿ ಮತ್ತುತನಿಖೆ ಕಾರ್ಯಗಳನ್ನು ಚುರುಕುಗೊಳಿಸಿ, ಚುನಾವಣೆಯನ್ನು ಮುಕತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಸಾರ್ವಜನಿಕರುಇಲಾಖೆಯೊಂದಿಗೆ ಸಹಕರಿಸಿ, ನಕಲಿ, ಕಳ್ಳಭಟ್ಟಿ, ಅನಧಿಕೃತ ಮದ್ಯತಯಾರಿ, ಸಾಗಾಣಿಕೆ, ದಾಸ್ತಾನು ಮತ್ತು ಮಾರಾಟ ಕಂಡುಬಂದಲ್ಲಿ ಟೋಲ್ ಫ್ರೀ ನಂ.: 1800 4250 732, ಉಡುಪಿ ದೂ.ಸಂಖ್ಯೆ: 0820-2532732, ಕುಂದಾಪುರ ದೂ.ಸಂಖ್ಯೆ: 08254-200902 ಹಾಗೂ ಕಾರ್ಕಳ ದೂ.ಸಂಖ್ಯೆ: 08258-298865 ತಾಲೂಕು ಕಂಟ್ರೋಲ್ ರೂಂ ಅಥವಾ ಅಬಕಾರಿ ಅಧಿಕಾರಿಗಳ ಸಂಚಾರಿ ದೂರವಾಣಿ ಸಂಖ್ಯೆಗಳಾದ ಜಿಲ್ಲಾ ಅಬಕಾರಿ ಉಪ ಆಯುಕ್ತರು ಮೊ.ನಂ: 9449597104, ಉಡುಪಿ ಉಪ ವಿಭಾಗದಅಬಕಾರಿ ಉಪ ಅಧೀಕ್ಷಕರು ಮೊ.ನಂ: 9449597113, ಕುಂದಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಮೊ.ನಂ: 9449597777, ಉಡುಪಿ ಉಪ ವಿಭಾಗದ ಅಬಕಾರಿ ನಿರೀಕ್ಷಕರು ಮೊ.ನಂ: 9449597114, ಕುಂದಾಪುರ ಉಪ ವಿಭಾಗದ ಅಬಕಾರಿ ನಿರೀಕ್ಷಕರು ಮೊ.ನಂ: 9449597778, ಉಡುಪಿ ವಲಯ-1 ಅಬಕಾರಿ ನಿರೀಕ್ಷಕರು ಮೊ.ನಂ: 9448921980, ಉಡುಪಿ ವಲಯ-2ಅಬಕಾರಿ ನಿರೀಕ್ಷಕರು ಮೊ.ನಂ:9731860034, ಕಾರ್ಕಳ ವಲಯಅಬಕಾರಿ ನಿರೀಕ್ಷಕರು ಮೊ.ನಂ: 9686198924, ಕುಂದಾಪುರ ವಲಯಅಬಕಾರಿ ನಿರೀಕ್ಷಕರು ಮೊ.ನಂ: 9731674117 ಹಾಗೂ ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕರು ಮೊ.ನಂ: 9035773785 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ