ಅಜೆಕಾರು: ಕಫದ ಸಮಸ್ಯೆಯಿಂದ 2 ತಿಂಗಳ ಹಸುಗೂಸೊಂದು ಹಸುನೀಗಿದ ಘಟನೆ ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ಮಾರ್ಲಿ ದರ್ಖಾಸು ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಪ್ರಸನ್ನ ಇವರ ಮಗು ಪ್ರದ್ವಿತ್ (2 ತಿಂಗಳ) ಮೃತಪಟ್ಟ ಮಗು.
ನಿನ್ನೆ ರಾತ್ರಿ ವೇಳೆ ಮಗುವಿಗೆ ಕಫ ಜಾಸ್ತಿಯಾಗಿದ್ದರಿಂದ ಚಿಕಿತ್ಸೆಗಾಗಿ ಕಾರ್ಕಳದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದು ವೈದ್ಯರು ಪರೀಕ್ಷಿಸಿ ಔಷಧಿ ನೀಡಿ ಬಳಿಕ ಮನೆಗೆ ಬಂದಿದ್ದರು.
ನಿನ್ನೆ ಬೆಳಗ್ಗಿನ ಜಾವ ಮಗು ಪ್ರದ್ವಿತ್ ಜೋರಾಗಿ ಅಳುತ್ತಿದ್ದು ಉಸಿರು ಗಟ್ಟಿದಂತೆ ಆಗಿದ್ದ ಕಾರಣ ಮಗುವನ್ನು ಆಸ್ವತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಮಗುವನ್ನು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮೃತ ಮಗುವಿನ ತಂದೆ ನೀಡಿದ ಮಾಹಿತಿಯಂತೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.