ವೆಬ್ ಸೀರೀಸ್‌ನಿಂದ ಪ್ರೇರಣೆ ಪಡೆದು ಚಲಿಸುತ್ತಿರುವ ಕಾರಿನಿಂದ ನೋಟು ಎಸೆದು ಯೂಟ್ಯೂಬರ್ ಸಹಿತ ಇಬ್ಬರು ಜೈಲು ಪಾಲಾದ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ.
ಯೂಟ್ಯೂಬರ್ ಜೋರಾವರ್ ಸಿಂಗ್ ಕಲ್ಸಿ ಮತ್ತು ಆತನ ಸ್ನೇಹಿತ ಲಕ್ಕಿ ಕಾಂಬೋಜ್ ಬಂಧಿತರು. ಗುರುಗ್ರಾಮ್‌ನ ಡಿಎಲ್‌ಎಫ್ ಗಾಲ್ಫ್ ಕೋರ್ಸ್ ರಸ್ತೆಯ ಕೆಳಸೇತುವೆಯಲ್ಲಿ ಮಾರ್ಚ್ 2ರಂದು ಕಾರನ್ನು ಅಪಾಯಕಾರಿಯಾಗಿ ಚಲಾಯಿಸುತ್ತಾ ಹಿಂಬದಿಯಿಂದ ಇವರು ನೋಟುಗಳನ್ನು ಎಸೆಯುತ್ತಿದ್ದರು. ಶಾಹಿದ್ ಕಪೂರ್, ಕೆಕೆ ಮೆನನ್ ಅಭಿನಯದ ʼಫರ್ಜಿʼ ವೆಬ್ ಸಿರೀಸ್ ನ ರೀ ಕ್ರಿಯೇಟ್ ದೃಶ್ಯವನ್ನಾಗಿ ಮಾಡಿ ರೀಲ್ಸ್ ಮಾಡುವ ಉದ್ದೇಶದಿಂದ ಇವರಿಬ್ಬರು ಈ ಕೃತ್ಯ ಎಸಗಿದ್ದರು.
ಕಾರಿನಿಂದ ನೋಟು ಎಸೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವೀಡಿಯೋವನ್ನು ಡಿಲೀಟ್ ಮಾಡಲಾಗಿತ್ತು. ಆದರೆ ಪೊಲೀಸರು ಇಬ್ಬರ ಮೇಲೆ ಅಪಾಯಕಾರಿ ಚಾಲನೆ ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುವ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಇನ್ನು ಕೇವಲ ರೀಲ್ಸ್ ನಟನೆಗಾಗಿ ಈ ದೃಶ್ಯ ಮಾಡಲಾಗಿದೆ. ಅಲ್ಲಿ ಬಳಸಿರುವ ನೋಟು ನಕಲಿ ಎಂದು ಆರೋಪಿಗಳು ಪೊಲೀಸರೆದುರು ಬಾಯ್ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.