ಮಂಗಳೂರು : ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದ ಯಶಸ್ವಿ ತುಳು ನಾಟಕ ಶಿವದೂತೆ ಗುಳಿಗೆ ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ ಎನ್ನಲಾಗಿರುವ ವ್ಯಂಗ್ಯ ಮಾತೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತುಳುವರ ಗುಳಿಗ ದೈವಕ್ಕೆ ಅಪಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರಗ ಜ್ಞಾನೇಂದ್ರ ಅವರ ವ್ಯಂಗ್ಯ ವ್ಯಂಗ್ಯ ಭಾಷಣದ ತುಣುಕನ್ನು ವೈರಲ್‌ಮಾಡಲಾಗಿದೆ.
ಮಾ.14ರಂದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಶಿವದೂತೆ ಗುಳಿಗೆ ನಾಟಕ ಆಯೋಜಿಸಿದ್ದರು. ಈ ನಾಟಕ ಪ್ರದರ್ಶನ ಕುರಿತು ಎಲ್ಲೆಡೆ ಪೋಸ್ಟರ್ ಅಂಟಿಸಲಾಗಿತ್ತು. ಈ ಬಗ್ಗೆ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಗೃಹ ಸಚಿವ ಆರಗ ಕಾಂಗ್ರೆಸನ್ನು ನಂಬಬೇಡಿ, ಗುಳಿಗೆ ಎಂದು ಜಾಪಾನ್ ಮಾತ್ರೆ ನೀಡಿ ಜನರಿಗೆ ವಂಚಿಸುತ್ತಾರೆ ಎಂದು ವ್ಯಂಗ್ಯವಾಡಿದ್ದರು.
ಮಹಿ ಮೂಲ್ಕಿ ಎಂಬ ಟ್ವಿಟ್ ಬಳಕೆದಾರ ಸಚಿವರ ಭಾಷಣವನ್ನು ಹಂಚಿಕೊಂಡು, ತೀರ್ಥಹಳ್ಳಿ ಹೊರ ಊರೇನು ಅಲ್ಲ. ತುಳುನಾಡಿಗೆ ತಾಗಿಕೊಂಡಿರುವ ಊರು. ತುಳುನಾಡಿನ ಮೂಲ ನಿವಾಸಿಗಳಾದ ಆದಿದ್ರಾವಿಡರು, ಮುಂಡಾಲರು ಸೇರಿದಂತೆ ವಿವಿಧ ಮೂಲನಿವಾಸಿಗಳು ಕೆಲಸವನ್ನು ಆಶ್ರಯಿಸಿ ಅಲ್ಲಿಯೇ ನೆಲೆಯಾಗಿದ್ದಾರೆ. ತಮ್ಮೊಂದಿಗೆ ತಾವು ನಂಬಿರುವ ದೈವಗಳನ್ನು ಅಲ್ಲಿ ನಂಬುತ್ತಿದ್ದಾರೆ. ಗುಳಿಗ ದೈವ ಘಟ್ಟದಲ್ಲಿಯೂ ಇದೆ ಹೀಗಿರುವಾಗ ಗೃಹಸಚಿವರಾಗಿರುವ ಆರಗ ಜ್ಞಾನೇಂದ್ರ ಅವರಿಗೆ ತುಳುವರ ಆರಾಧ್ಯ ದೈವವಾಗಿರುವ ಗುಳಿಗನ ಬಗ್ಗೆ ಗೊತ್ತಿಲ್ಲ ಎನ್ನುವುದನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೂ ಅನೇಕರು ಈ ಪೋಸ್ಟ್ ಗೆ ಪ್ರತಿಕ್ರಿಯಿಸಿ ಗೃಹ ಸಚಿವರು ಕರಾವಳಿಗರ ಬಳಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ..