ಶಿರ್ವ: ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ ಮತ್ತು ಶ್ರೀ ವಿಶ್ವ ಬ್ರಾಹ್ಮಣ ಮಹಿಳಾ ಬಳಗದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮ

ಶಿರ್ವ(ಮಾ.16): ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ (ರಿ). ಶಿರ್ವ ಮತ್ತು ಶ್ರೀ ವಿಶ್ವ ಬ್ರಾಹ್ಮಣ ಮಹಿಳಾ ಬಳಗ ಶಿರ್ವ ಇದರ ದಶಮಾನೋತ್ಸವ ಸಂಭ್ರಮದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿರುವ ಶ್ರೀ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ವಿಶ್ವಕರ್ಮ ಯುವ ಜನಾಂಗ ಸಾಮಾಜಿಕ ಚಟುವಟಿಕೆಯಲ್ಲಿ ಹಿಂದಿದೆ.

14ರಿಂದ 20 ವರ್ಷದ ಯುವಕರು ಕೇವಲ ಮೊಬೈಲ್ ನಲ್ಲಿ ತಲ್ಲಿನರಾಗಿದ್ದು ಈ ಬಗ್ಗೆ ಪಾಲಕರು ಮುತುವರ್ಜಿ ವಹಿಸಿ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಲ್ಲಿ ಜವಾಬ್ದಾರಿ ವಹಿಸಬೇಕು. ಎಲ್ಲಾ ಸಮಾಜದವರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಅದು ವಿಶ್ವಕರ್ಮ ಸಮಾಜದವರಿಂದ ಮಾತ್ರ ಸಾಧ್ಯ ಎಂದು ದೀಪ ಪ್ರಜ್ವಲನಗೊಳಿಸಿ ಆಶೀರ್ವದಿಸಿದರು. ಎಲ್ಲವನ್ನು ಸಾಧಿಸುವವರು ವಿಶ್ವಕರ್ಮರು.

ರಾಜಕೀಯದಲ್ಲಿ ಗುರುತಿಸಬೇಕಿದ್ದರೆ ಸಂಘಟನೆಗಳು ಅತಿ ಪ್ರಾಮುಖ್ಯ ಎಂದು ವಿದ್ಯಾವರ್ಧಕ ಸಂಘ( ರಿ.) ಇದರ ಆಡಳಿತ ಅಧಿಕಾರಿ ಪ್ರೊಫೆಸರ್ ವೈ ಭಾಸ್ಕರ್ ಶೆಟ್ಟಿ ಇವರು ಅನಿಸಿಕೆ ವ್ಯಕ್ತಪಡಿಸಿದರು. ಕಾಪು ಕ್ಷೇತ್ರದ ಶಾಸಕರಾದ ಶ್ರೀ ಲಾಲಾಜಿ ಆರ್. ಮೆಂಡನ್ ಕಟಪಾಡಿ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ನವೀನ್ ಆಚಾರ್ಯ, ದ.ಕ. ಜಿಲ್ಲೆ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರು ಶ್ರೀ ಮಧು ಆಚಾರ್ಯ ಮುಲ್ಕಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷರಾದ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತನ್ ಕುಮಾರ್ ಶೆಟ್ಟಿ, ಯೋಗೀಶ್ ಆಚಾರ್ಯ ಉಡುಪಿ, ಮಣಿಪಾಲ ಡಾ ಪ್ರತಿಮಾ ಜಯ ಪ್ರಕಾಶ್ ಆಚಾರ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಶ್ರೀ ಕೆ.ಮನೋಹರ್ ಶೆಟ್ಟಿ, ಶಿರ್ವ ಸಿದ್ದಿವಿನಾಯಕ ದೇವಸ್ಥಾನದ ಸ್ಥಾಪಕರಾದ ಶ್ರೀ ಗ್ಲಾಬ್ರಿಯಲ್ ನಜರತ್, ಶ್ರೀ ವಾಸುದೇವ ಆಚಾರ್ಯ ಪರ್ಕಳ, ಹಿರಿಯ ದಂಪತಿಗಳಾದ ಶ್ರೀಮತಿ ಮತ್ತು ಶ್ರೀ ವ್ಯಾಸರಾಯ ಆಚಾರ್ಯ ಶಿರ್ವ ಇವರನ್ನು ಸನ್ಮಾನಿಸಲಾಯಿತು. ಇಬ್ಬರಿಗೆ ವೈದಿಕೀಯ ನೆರವು, 17 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಂಸ್ಥೆಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ, 4 ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಸ್ಥೆಯ ಸ್ಥಾಪಕ ಶ್ರೀ ಶ್ರೀಕಾಂತ್ ಆಚಾರ್ಯ ಕಾಪು ಪ್ರಾಸ್ತಾವನೆ ಗೈದರು. ಗೌರವಾಧ್ಯಕ್ಷರಾದ ಶ್ರೀ ಸುರೇಶ್ ಆಚಾರ್ಯ ಮಹಿಳಾ ಬಳಗದ ಅಧ್ಯಕ್ಷೆ ಶ್ರೀಮತಿ ಸುಮತಿ ಭಾಸ್ಕರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷರಾದ ಉಮೇಶ್ ಆಚಾರ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ರವಿ ಪುರೋಹಿತರು ವಿಶ್ವಕರ್ಮ ಪೂಜೆ ನೆರವೇರಿಸಿದರು. ಪೂರೋಹಿತ್ ಶ್ರೀ ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಮಾಧವ ಆಚಾರ್ಯ ವಂದಿಸಿದರು ನಂತರ ಸದಸ್ಯರಿಂದ ವಿವಿಧ ಮನೋರಂಜನೆ ಕಾರ್ಯಕ್ರಮ, ಥಂಡರ್ ಗೈಸ್ ಫೌಂಡೇಶನ್ (ರಿ) ಬಜ್ಪೆ ಇವರಿಂದ “ಕ್ಷೇತ್ರ ಪುರಾಣ ಮಂಜರಿ” ಕಾರ್ಯಕ್ರಮ ನೆರವೇರಿತು. ದಶಮಾನೋತ್ಸವದ ಸಂಚಾಲಕರಾದ ಶ್ರೀ ಪ್ರಶಾಂತ್ ಆಚಾರ್ಯ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Scroll to Top