ಹಾಲು ಕುಡಿಯುತ್ತಿದ್ದಾಗ 28 ದಿನದ ಮಗು ಸಾವು : ಮನನೊಂದು ಮತ್ತೊಬ್ಬ ಮಗನ ಜೊತೆ ತಾಯಿ ಆತ್ಮಹತ್ಯೆ

ಕೇರಳ (ಮಾರ್ಚ್ 16): ಹಾಲುಣಿಸುವಾಗ ಪುಟ್ಟ ಮಗು ಉಸಿರು ಕಟ್ಟಿ ಸಾವನಪ್ಪಿದ ಬೆನ್ನಲ್ಲೇ ತಾಯಿ ತನ್ನ 7 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ತಾಯಿ ಲಿಜಿ (38) ಮತ್ತು ಆಕೆಯ ಮಗ ಬೆನ್ ಟಾಮ್ (7) ಎಂದು ಗುರುತಿಸಲಾಗಿದೆ.

ಒಂದು ದಿನದ ಹಿಂದೆಯಷ್ಟೇ ಲಿಜಿ ಅವರ 28 ದಿನದ ನವಜಾತ ಶಿಶು ಹಾಲು ಕುಡಿಯುವಾಗ ಉಸಿರುಗಟ್ಟಿ ಮೃತಪಟ್ಟಿದೆ. ಬುಧವಾರವೇ ಮಗುವಿನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಅದೇ ದುಃಖದಲ್ಲಿ ಮೌನವಾಗಿಯೇ ಇದ್ದ ಲಿಜಿ ತನ್ನ ಮನೆಯವರು ಗುರುವಾರ ಚರ್ಚ್‌ ಗೆಂದು ಹೋಗುವಾಗ, ಲಿಜಿ ಹಾಗೂ ಮಗ ಇಬ್ಬರು ಚರ್ಚ್‌ಗೆ ಹೋಗದೆ ಮನೆಯಲ್ಲೇ ಇದ್ದರು.

ಮನೆಯವರು ಚರ್ಚ್‌ ನಿಂದ ವಾಪಾಸ್‌ ಬರುವಾಗ ಮನೆಯಲ್ಲಿ ಲಿಜಿ ಹಾಗೂ ಬೆನ್‌ ಟಾಮ್‌ ಇಲ್ಲದಿರುವುದನ್ನು ನೋಡಿದ್ದಾರೆ. ಎಲ್ಲೆಡೆ ಹುಡುಕಿದಾಗ ಕೊನೆಗೆ ಬಾವಿಯಲ್ಲಿ ಇಬ್ಬರು ಇರುವುದು ಪತ್ತೆಯಾಗಿದೆ. ಅಗ್ನಿಶಾಮಕ ದಳದವರು ಬಂದು ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ.

You cannot copy content from Baravanige News

Scroll to Top