22ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ..!!

ಪಡುಬಿದ್ರಿ: ಕಳೆದ 22 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮಾರೆಸಿಕೊಂಡಿದ್ದ ಹಳೇ ಆರೋಪಿ ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕು ಬಳಸಗೋಡು ಗ್ರಾಮದ ನಿವಾಸಿ ಹುಚ್ಚಪ್ಪನನ್ನು ಪಡುಬಿದ್ರಿ ಠಾಣಾ ಪಿಎಸ್‌ಐಗಳಾದ ಪುರುಷೋತ್ತಮ್‌ ಮತ್ತು ಶಿವರುದ್ರಮ್ಮ ಅವರ ಮಾರ್ಗದರ್ಶನದಲ್ಲಿ ಠಾಣಾ ಎಚ್‌ಸಿ ರುದ್ರೇಶ್‌ ಮತ್ತು ಪಿಸಿ ಕರಿಬಸಜ್ಜ, ಪಿಸಿ ಮಧುಸೂದನ್‌ ಅವರು ಸಾಗರದಲ್ಲಿ ದಸ್ತಗಿರಿ ಮಾಡಿದ್ದಾರೆ.

ಈತನ ಬಂಧನಕ್ಕೆ ನ್ಯಾಯಾಲಯದಿಂದ ವಾರಂಟ್‌ ಹೊರಡಿಸಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನಿಗೆ ನ್ಯಾಯಾಲಯವು ಮಾ. 30ರ ವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

You cannot copy content from Baravanige News

Scroll to Top