ವಿವಾಹ ನಿಶ್ಚಯಗೊಂಡಿದ್ದ ಯುವತಿ ಆತ್ಮಹತ್ಯೆ..!!

ಕಾಸರಗೋಡು: ವಿವಾಹ ನಿಶ್ಚಯವಾಗಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪುಲ್ಲೂರು ಪೆರಿಯದಲ್ಲಿ ನಡೆದಿದೆ.


ಚಾಲಿಂಗಾಲ್ ನ ಸಂಶುದ್ದೀನ್ ರವರ ಪುತ್ರಿ ಫಾತಿಮಾ (18) ಮೃತರು.

ಮನೆಯವರು ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದ್ದು, ಮನೆಯವರು ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.

ಅಂಬಲತ್ತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You cannot copy content from Baravanige News

Scroll to Top