ನವದೆಹಲಿ: ಎರಡು ದಿನಗಳ ಭಾರತ ಭೇಟಿಯಲ್ಲಿರುವ ಜಪಾನ್ ಪ್ರಧಾನಿ ಫೆಮಿಯೊ ಕಿಶಿದಾ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಯಲ್ಲಿ ಲಸ್ಸಿ ಮತ್ತು ಪಾನಿಪುರಿ ಸೇರಿದಂತೆ ಭಾರತೀಯ ತಿನಿಸುಗಳನ್ನು ಸವಿದಿದ್ದಾರೆ.
ಇಲ್ಲಿನ ಬುದ್ಧ ಜಯಂತಿ ಉದ್ಯಾನದಲ್ಲಿ ಸೋಮವಾರ ಸಂಜೆ ಪಾನಿಪುರಿ ಸೇರಿದಂತೆ ಹಲವು ಭಾರತೀಯ ತಿನಿಸುಗಳನ್ನು ಸವಿದಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಜಪಾನ್ ಸಹವರ್ತಿ ಗೋಲ್ ಗಪ್ಪಾಗಳನ್ನು ಸವಿಯುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
“ನನ್ನ ಸ್ನೇಹಿತ ಪ್ರಧಾನಿ ಫೆಮಿಯೊ ಕಿಶಿದಾ ಅವರು ಗೋಲ್ ಗಪ್ಪಾ ಸೇರಿದಂತೆ ಭಾರತೀಯ ತಿಂಡಿಗಳನ್ನು ಆನಂದಿಸಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನೊಂದಿಗೆ ನಾಲ್ಕು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಕಿಶಿದಾ ಪ್ರಧಾನಿ ಮೋದಿಯವರೊಂದಿಗೆ ಪಾನಿಪುರಿಯನ್ನು ಸವಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬುದ್ಧ ಜಯಂತಿ ಉದ್ಯಾನದಲ್ಲಿ ಬೆಂಚಿನ ಮೇಲೆ ಕುಳಿತು ಮಣ್ಣಿನಿಂದ ತಯಾರಿಸಿದ ಲೋಟದಲ್ಲಿ ಚಹಾ ಕುಡಿದು ಆನಂದಿಸಿದರು.