ಟಾರ್ಗೆಟ್‌ ʻಕಮಲʼ: ಬಿಜೆಪಿಯ ಚುನಾವಣಾ ಚಿಹ್ನೆ ಬ್ಯಾನ್‌ ಮಾಡಿ ; ಸುಪ್ರೀಂ ಕೋರ್ಟ್ ನಲ್ಲಿ ಮುಸ್ಲಿಂ ಲೀಗ್‌ ದಾವೆ

ನವದೆಹಲಿ: ಧಾರ್ಮಿಕ ಹೆಸರು ಮತ್ತು ಧಾರ್ಮಿಕ ಸಂಕೇತಗಳನ್ನು ಚುನಾವಣಾ ಚಿಹ್ನೆಯಾಗಿ ಬಳಸಬಾರದು ಎಂಬ ನಿಯಮದಡಿ ಬಿಜೆಪಿಯ ತಾವರೆ ಚಿಹ್ನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಮುಸ್ಲಿಂ ಲೀಗ್ ಕೋರ್ಟಿನ ಮೆಟ್ಟಿಲೇರಿದೆ.



‘ಕಮಲ’ ಧಾರ್ಮಿಕ ಪಾವಿತ್ರ್ಯ ಹೊಂದಿರುವ ಚಿಹ್ನೆ. ಬಿಜೆಪಿಯ ಚುನಾವಣಾ ಚಿಹ್ನೆ ಕೂಡ ‘ಕಮಲ’. ಆದ್ದರಿಂದ ಬಿಜೆಪಿಯ ಚುನಾವಣಾ ಚಿಹ್ನೆ ಬ್ಯಾನ್ ಮಾಡಬೇಕು. ಈ ಪ್ರಕರಣದಲ್ಲಿ ಬಿಜೆಪಿಯನ್ನು ಪ್ರತಿವಾದಿಯನ್ನಾಗಿಸಬೇಕು ಎಂದು ಆಗ್ರಹಿಸಿ ಐಯುಎಂಎಲ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಮುಸ್ಲಿಂ ಲೀಗ್ ಪರವಾಗಿ ಹಿರಿಯ ವಕೀಲ ದುಷ್ಯಂತ್ ದವೆ ವಾದಿಸುತ್ತಿದ್ದಾರೆ. ಈ ವಿಷಯದಲ್ಲಿ ನಾವು ಬಹು ಕಕ್ಷಿದಾರರನ್ನು ಒಳಗೊಂಡ ಅರ್ಜಿಯನ್ನು ಸಲ್ಲಿಸಿದ್ದೇವೆ. ಇವುಗಳಲ್ಲಿ ಭಾರತೀಯ ಜನತಾ ಪಾರ್ಟಿ ಕೂಡ ಸೇರಿದೆ. ಬಿಜೆಪಿಯ ಚುನಾವಣಾ ಚಿಹ್ನೆ ಕಮಲವಾಗಿದ್ದು, ಅದು ಧಾರ್ಮಿಕ ಸಂಕೇತವಾಗಿದೆ ಎಂದು ದವೆ ವಾದ ಮಂಡಿಸಿದರು.



ಕಮಲ ಹಿಂದು ಮತ್ತು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಧಾರ್ಮಿಕ ಸಂಕೇತವಾಗಿದೆ ಎಂದು ಉಲ್ಲೇಖಿಸಲಾಗಿದೆ. ಶಿವಸೇನೆ, ಶಿರೋಮಣಿ ಅಕಾಲಿದಳ, ಹಿಂದು ಸೇನೆ, ಹಿಂದು ಮಹಾಸಭಾ, ಕ್ರಿಶ್ಚಿಯನ್ ಡೆಮಾಕ್ರಟಿಕ್ ಫ್ರೆಂಟ್ ಮತ್ತು ಇಸ್ಲಾಂ ಪಾರ್ಟಿ ಹಿಂದ್ ಮೊದಲಾದ 26 ಪಕ್ಷಗಳನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ ಹಿಂದು ಧರ್ಮದ ಪ್ರಕಾರ, ಪ್ರತಿಯೊಬ್ಬ ಮನುಷ್ಯನೊಳಗೆ ಪವಿತ್ರ ಕಮಲದ ಚೈತನ್ಯವಿದೆ. ಇದು ಅಮರತ್ವ, ಶುದ್ಧತೆ, ದೈವತ್ವವನ್ನು ಸೂಚಿಸುತ್ತದೆ. ಹಾಗೆಯೇ ಇದು ಜೀವನ, ಫಲವತ್ತತೆ, ಹೊಸತಲೆಮಾರಿನ ಯುವಜನರ ಸಂಕೇತವಾಗಿ ಬಳಸಲಾಗುತ್ತದೆ. ಕಮಲದ ಹೂವುಗಳನ್ನು ವಿಶೇಷವಾಗಿ ಮಹಿಳೆಯ ಸೌಂದರ್ಯವನ್ನು ವಿವರಿಸಲು ಬಳಸಲಾಗುತ್ತದೆ.

ಮಹಿಳೆಯರ ಕಣ್ಣುಗಳಿಗೂ ಹೋಲಿಕೆಯಾಗಿ ಕಮಲವನ್ನು ಬಳಸಲಾಗುತ್ತದೆ. ಬೌದ್ಧರಿಗೆ, ಕಮಲದ ಹೂವು ಮನುಷ್ಯನ ಅತ್ಯಂತ ಮುಂದುವರಿದ ಸ್ಥಿತಿಯ ಸಂಕೇತವಾಗಿದೆ. ಇಷ್ಟೇ ಅಲ್ಲ… ಭಗವಾನ್ ವಿಷ್ಣು, ಬ್ರಹ್ಮ, ಶಿವ ಮತ್ತು ಲಕ್ಷ್ಮಿ ದೇವತೆ ಹಿಂದೂ ಧರ್ಮದಲ್ಲಿನ ಕಮಲದ ಹೂವಿನೊಂದಿಗೆ ಸಹ ಸಂಬಂಧಿಸಿವೆ ಎಂದು ಐಯುಎಂಎಲ್ ಅರ್ಜಿಯಲ್ಲಿ ಉಲ್ಲೇಖಿಸಿದೆ.

Scroll to Top