ಶಿರ್ವ: ನೂತನ ಡಿಜಿಟಲ್ ಧ್ವನಿ ವೇಳಾಪಟ್ಟಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯ ಉದ್ಘಾಟನೆ

ಶಿರ್ವ ಜು 22: ಶಿರ್ವ ನೂತನ ಬಸ್ಸುನಿಲ್ದಾಣದಲ್ಲಿ ವಿಶೇಷ ಧ್ವನಿ ವರ್ಧಕದ ಮೂಲಕ ಬಸ್ಸು ವೇಳಾಪಟ್ಟಿ, ಹೊರಡುವ ಸಮಯ, ಸ್ಥಳ ಹಾಗೂ ಇತರೇ ಮಾಹಿತಿಯನ್ನು ಧ್ವನಿವರ್ಧಕ ಸಹಿತ ಟಿ.ವಿ ಯಲ್ಲಿ ಬಿತ್ತರಿಸುವ ಹಾಗೂ ಶುಧ್ಧ ಕುಡಿಯುವ ನೀರಿನ ವ್ಯವಸ್ಥೆ ಉಧ್ಘಾಟನಾ ಕಾರ್ಯಕ್ರಮ ನೆರವೇರಿತು.

ಶಿರ್ವ ಗ್ರಾಮ ಪಂಚಾಯತ್ ನ ನೂತನ ಬಸ್ಸು ನಿಲ್ದಾಣದಲ್ಲಿ ಶುಧ್ಧ ಕುಡಿಯುವ ನೀರಿನ ಘಟಕ ಹಾಗೂ ಪ್ರಯಾಣಿಕರಿಗೆ ಶಿರ್ವ ಬಸ್ಸು ನಿಲ್ದಾಣದಿಂದ ಬೇರೆ ಬೇರೆ ಊರುಗಳಿಗೆ ಹೋಗುವ ಬಸ್ಸಿನ ಸಮಯ , ಬಸ್ಸಿನ ಹೆಸರು, ಬಸ್ಸುಗಳು ಹೋಗುವ ಮಾರ್ಗಗಳ ಮಾಹಿತಿ, ಹಾಗೂ ಇತರೇ ಮಾಹಿತಿಗಳನ್ನುಧ್ವನಿವರ್ಧಕ ಸಹಿತಿ ಟಿ.ವಿ ಮೂಲಕ ಬಿತ್ತರಿಸುವ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಶಿರ್ವದಲ್ಲಿ ಪರಿಚಯಿಸಲಾಯಿತು.

ಟಿವಿ ಹಾಗೂ ಧ್ವನಿವರ್ಧಕದ ದಾನಿ ಸು‌‌ಧಾನ್ ಸಿಂಗ್ ಹಾಗೂ ನೀರಿನ ವ್ಯವಸ್ಥೆಯ ದಾನಿ ಶ್ರೀ ಮಿಸ್ಕಿತ್ ಮೆನೆಜಸ್ ಇವರನ್ನು ಸ್ಥಳದಲ್ಲಿ ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಕೆ.ಆರ್ ಪಾಟ್ಕರ್, ಶಿರ್ವ ಠಾಣಾಧಿಕಾರಿ ಶ್ರೀ ರಾಘವೇಂದ್ರ, ಅನಂತಪದ್ಮನಾಭ ನಾಯಕ್, ಅಭಿವೃದ್ದಿ ಅಧಿಕಾರಿ, ಬಸ್ಸು ಮಾಲಕರ ಸಂಘದ ಪರವಾಗಿ ಪ್ರೇಮನಾಥ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Scroll to Top