ರೈಲು ನಿಲ್ದಾಣದಲ್ಲಿ ʻಬ್ಲೂ ಫಿಲ್ಮ್‌ʼ ಪ್ರದರ್ಶನ; ಪ್ರಸಾರವಾದ ಬ್ಲೂ ಫಿಲ್ಮ್ ನನ್ನದೇ ಎಂದ ಪೋರ್ನ್ ಸ್ಟಾರ್..!

ಬಿಹಾರ: ಇತ್ತೀಚೆಗೆ ಪಾಟ್ನಾ ರೈಲು ನಿಲ್ದಾಣದ 10ನೇ ಪ್ಲಾಟ್‌ಫಾರ್ಮ್ನಲ್ಲಿ ಹಾಕಲಾಗಿದ್ದ ಟಿವಿಯಲ್ಲಿ ದಿಢೀರ್ ಪೋರ್ನ್ ವಿಡಿಯೋವೊಂದು ಪ್ಲೇ ಆಗಿತ್ತು. ಇದಕ್ಕೆ ಇಡೀ ದೇಶಾದ್ಯಂತ ರೈಲ್ವೇ ಇಲಾಖೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಭಾರತೀಯ ರೈಲ್ವೆ ಇಲಾಖೆ ರೈಲು ನಿಲ್ದಾಣದಲ್ಲಿ ಟಿವಿ ಜಾಹೀರಾತು ಪ್ರಸಾರ ಮಾಡೋ ಜವಾಬ್ದಾರಿ ಹೊತ್ತ ಏಜೆನ್ಸಿ ಜತೆಗೆ ಒಪ್ಪಂದ ರದ್ದು ಮಾಡಿದೆ. ಈ ಕೃತ್ಯ ಖಂಡನೀಯ, ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಒಪ್ಪಂದ ರದ್ದುಗೊಳಿಸಿ ಅಧಿಕೃತ ಆದೇಶವನ್ನು ರೈಲ್ವೆ ಇಲಾಖೆ ಹೊರಡಿಸಿದೆ.

ಈಸ್ಟ್ ಸೆಂಟ್ರಲ್ ರೈಲ್ವೇ ಇಲಾಖೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವೀರೇಂದ್ರ ಕುಮಾರ್ ಈ ಆದೇಶ ಹೊರಡಿಸಿದ್ದಾರೆ. ಮಾರ್ಚ್ 19ನೇ ತಾರೀಕು ನಡೆದ ಈ ಕೃತ್ಯ ಖಂಡನೀಯ. ಇದೊಂದು ಅಸಹ್ಯಕರ ಘಟನೆ. ಇದಕ್ಕೆ ಕಾರಣವಾದ ದತ್ತಾ ಸ್ಟುಡಿಯೋ ಕಂಪನಿ ಪ್ರೈವೇಟ್ ಲಿಮಿಟೆಡ್ ವಿರುದ್ಧ ಎರಡು ಪ್ರತ್ಯೇಕ ಎಫ್​​ಐಆರ್​ ದಾಖಲಿಸಿದ್ದೇವೆ ಎಂದಿದ್ದಾರೆ ವೀರೇಂದ್ರ ಕುಮಾರ್.

ನಾವು ಈ ಎಜೆನ್ಸಿಯೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿದ್ದೇವೆ. ಅಲ್ಲದೇ ಬ್ಲಾಕ್ ಲಿಸ್ಟ್ಗೆ ಈ ಏಜೆನ್ಸಿಯನ್ನು ಸೇರಿಸಲಾಗಿದೆ. ಹಾಗೆಯೇ ಈ ಏಜೆನ್ಸಿ ಜತೆಗೆ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಟಿವಿಗಳ ಸಂಪರ್ಕ ಕಟ್ ಮಾಡಲಾಗಿದೆ. ಘಟನೆ ಕುರಿತು ಆರ್‌ಪಿಎಫ್ ಮತ್ತು ಜಿಆರ್‌ಪಿ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.

ಇನ್ನು, ರೈಲ್ವೆ ಸ್ಟೇಷನ್ ಟಿವಿಯಲ್ಲಿ ಪ್ರಸಾರವಾದ ವೀಡಿಯೋ ದೃಶ್ಯಗಳನ್ನು ಜನ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದಾದ ಬೆನ್ನಲ್ಲೇ ಸಾರ್ವಜನಿಕರು ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸದ್ಯ ನೆಟ್ಟಿಗರು ಒಬ್ಬರು ಒಂದು ಹೆಜ್ಜೆ ಮುಂದೆ ಹೋಗಿ, ಈ ವಿಡಿಯೋ ನಿಮಗೆ ಗೊತ್ತೇ? ಇದರಲ್ಲಿ ಇರೋದು ನೀವೇ ತಾನೇ? ಎಂದು ಪೋರ್ನ್​ ಸ್ಟಾರ್​​ ಕೇಂದ್ರ ಲಸ್ಟ್​​ ಎಂಬ ತಾರೆಗೆ ಟ್ವಿಟರ್​ನಲ್ಲಿ ಟ್ಯಾಗ್​ ಮಾಡಿದ್ದರು. ಇದಕ್ಕೆ ಟ್ವೀಟ್​ ಮೂಲಕ ಉತ್ತರ ನೀಡಿದ ಕೇಂದ್ರ ಲಸ್ಟ್, ಇದು ನನ್ನದೇ ವಿಡಿಯೋ. ಅದರಲ್ಲೂ ನನ್ನ ಕೊನೇ ವಿಡಿಯೋ ಅನಿಸುತ್ತೆ ಎಂದು ಬೋಲ್ಡ್​ ಆಗಿ ಹೇಳಿದ್ದಾರೆ.

Scroll to Top