ನಾಡಿನಾದ್ಯಂತ ಜನರು ಯುಗಾದಿ ಹಬ್ಬ ಸಂತಸದಲ್ಲಿದ್ದಾರೆ. ಮನೆ ಮನೆಯಲ್ಲೂ ಈ ಹಬ್ಬವನ್ನು ಆಚರಿಸುತ್ತಿದ್ದಾರೆ. ಅದರಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡಿಗರಿಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಪ್ರಾರ್ಥಿಸಿದ್ದಾರೆ. ಈ ವಿಚಾರ ಕನ್ನಡಿಗರ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ.
ಮೋದಿ ಅವರು ಟ್ವೀಟ್ನಲ್ಲಿ ಎಲ್ಲರಿಗೂ ಸಂತಸದ ಯುಗಾದಿಯ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಭರವಸೆ ಮತ್ತು ಹೊಸ ಆರಂಭಗಳನ್ನು ಒಳಗೊಂಡ ಈ ಹಬ್ಬವು, ಮುಂಬರುವ ವರ್ಷದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅಪಾರ ಸಂತೋಷ ಮತ್ತು ಉತ್ತಮ ಆರೋಗ್ಯ ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ.
ಇವಿಷ್ಟು ಮಾತ್ರವಲ್ಲದೆ, ಮೋದಿ ತಮಿಳು ಭಾಷಿಗರಿಗೆ, ತೆಲುಗು ಭಾಷಿಗರಿಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.