ಬ್ರಹ್ಮಾವರ: ಅಕ್ರಮ ಸಾಗಾಟ : 5 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶಕ್ಕೆ..!!

ಬ್ರಹ್ಮಾವರ (ಮಾ.22): ತಾಲೂಕಿನ ಚಾಂತಾರು ಗ್ರಾಮದ ಕೃಷಿ ಕೇಂದ್ರದ ಬಳಿಯ ಬ್ರಹ್ಮಾವರ-ಹೆಬ್ರಿ ರಸ್ತೆಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 5,00,790 ರೂ. ಮೌಲ್ಯದ ಪಡಿತರ ಅಕ್ಕಿಯನ್ನು ಬ್ರಹ್ಮಾವರ ತಾಲೂಕು ಆಹಾರ ನಿರೀಕ್ಷಕರು ಪೊಲೀಸರ ಸಹಕಾರದೊಂದಿಗೆ ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ತಾಲೂಕು ಆಹಾರ ನಿರೀಕ್ಷಕರು, ಬ್ರಹ್ಮಾವರ ಠಾಣಾ ಪಿಎಸ್‌ಐ ಹಾಗೂ ಸಿಬಂದಿಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ, ಸಾಗಾಟಕ್ಕೆ ಬಳಸಿದ ಕಂಟೈನರ್ ವಾಹನವನ್ನು ಹಾಗೂ 5,00,790 ರೂ. ಮೌಲ್ಯದ 220 ಚೀಲ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ವಾಹನ ಚಾಲಕ ಕುಮಾರ (37) ಎಂಬಾತನ ಬಳಿ ವಿಚಾರಿಸಿದಾಗ ಯಾವುದೇ ದಾಖಲಾತಿಗಳನ್ನು ಸಲ್ಲಿಸಲು ಆತ ವಿಫಲನಾಗಿದ್ದು, ವಾಹನ ಮಾಲಕ ಪ್ರಶಾಂತ ನಾಯಕ್ ತಿಳಿಸಿದಂತೆ ಶಿರಿಯಾರ ಕಲ್ಮರ್ಗಿ ರೈಸ್‌ಮಿಲ್‌ನಿಂದ ಮಿಲ್‌ ಮಾಲಕ ಅನಂತ ನಾಯಕ್ ಅವರು ಕಂಟೈನರ್ ವಾಹನಕ್ಕೆ ಅಕ್ಕಿಯನ್ನು ತುಂಬಿಸಿ ಕೊಟ್ಟಿದ್ದರು. ಅದನ್ನು ತಾನು ಸಾಗಾಟ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾನೆ.

ಈ ಬಗ್ಗೆ ಆರೋಪಿಗಳ ವಿರುದ್ದ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top