ಕಾರ್ಕಳ: ಮಾ.22 ಬುಧವಾರ ಸೂಡ ಗ್ರಾಮದ ವಿವಿಧ ಕಡೆಗಳಲ್ಲಿ ಕಾಮಗಾರಿಗಳ ಗುದ್ದಲಿ ಪೂಜೆ ಮತ್ತು ಉದ್ಘಾಟನೆ ಯನ್ನು ಶಾಸಕರು, ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವರಾದ ಶ್ರೀ ವಿ ಸುನಿಲ್ ಕುಮಾರ್ ರವರು ನೆರವೇರಿಸಿದರು.
ಸೂಡ ಕೊಂಬಲಿಕೆ ಸುಂದರ ನಾಯ್ಕ ಮನೆ ಬಳಿಯ ನದಿಗೆ 6.88 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಮತ್ತು ಇನಾಸ್ ಡಿಸೋಜ ಮನೆ ಬಳಿ ನಿರ್ಮಿಸಲಾಗಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟುಗಳನ್ನು ಸಚಿವರು ಉದ್ಘಾಟಿಸಿದರು.
ಬಳಿಕ ನಡೆದ ಸಮಾರಂಭದ ವೇದಿಕೆಯಲ್ಲಿ, ಈ ಭಾಗದ ಜನರ ಬಹು ಕಾಲದ ಕನಸನ್ನು ನನಸಾಗಿಸಿದ ಸಚಿವರನ್ನು ಅಭಿಮಾನ ಪೂರ್ವಕವಾಗಿ ಅಭಿನಂದಿಸಲಾಯಿತು, ಇಂಜಿನಿಯರ್ ಗುರುರಾಜ್ ರಾಥೋಡ್, ಅಲ್ಪ ಅವಧಿಯಲ್ಲೆ ಕಾಮಗಾರಿ ಯನ್ನು ಪೂರ್ಣಗೊಳಿಸಿದ ಗುತ್ತಿಗೆದಾರರಾದ ವಸಂತ ಹೆಗ್ಡೆ ಕುಂದಾಪುರ , ಮಾಜಿ ಗ್ರಾಮ. ಪಂ ಅಧ್ಯಕ್ಷರಾದ ಶಂಕರ್ ಕುಂದರ್ ರವರನ್ನು
ವತಿಯಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಆಕಸ್ಮಿಕ ಅಗ್ನಿ ಅವಘಡಕ್ಕೆ ತುತ್ತಾಗಿ ಮನೆಯನ್ನು ಕಳೆದುಕೊಂಡಿರುವ ಸೂಡ ಪಡುಬೆಟ್ಟು ಗುಲಾಬಿ ಪೂಜಾರ್ತಿಯವರಿಗೆ,ಬ್ರೈಟ್ ಗ್ರೂಪ್ ಫ್ರೆಂಡ್ಸ್(ರಿ.) ಸೂಡ ಇವರ ವತಿಯಿಂದ ನೀಡಿದ ರೂ 25000/ ಚೆಕ್ ನ್ನು ಸಚಿವರು ಸಂತ್ರಸ್ಥರಿಗೆ ವಿತರಿಸಿದರು.
ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಶಿರ್ವ *ಕೋಡು ಜಯಶೀಲ ಹೆಗ್ಡೆ, ಕಾರ್ಕಳ ಬಿ.ಜೆ.ಪಿ ಕ್ಷೇತ್ರಾಧ್ಯಕ್ಷರಾದ ಮಹಾವೀರ್ ಹೆಗ್ಡೆ ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ ಸಾಲ್ಯಾನ್, ನವೀನ್ ನಾಯಕ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ. ಶ್ರೀಮತಿ ರೇಶ್ಮಾ ಉದಯ ಶೆಟ್ಟಿ, ಉಪಾಧ್ಯಕ್ಷರಾದ ಸೂರ್ಯಕಾಂತ ಶೆಟ್ಟಿ ಬೆಳ್ಮಣ್ಣು ಗ್ರಾಮ ಸಮಿತಿಯ ಅಧ್ಯಕ್ಷರಾದ ದೇವೇಂದ್ರ ಶೆಟ್ಟಿ, ಬೋಳ ಸತೀಶ್ ಪೂಜಾರಿ, ಪಳ್ಳಿ ಗ್ರಾಮ ಪಂ. ಅಧ್ಯಕ್ಷರಾದ ಸಂದೀಪ್ ಪೂಜಾರಿ, ಸೂಡ ಬೂತ್ ಅಧ್ಯಕ್ಷರುಗಳಾದ ಶ್ರೀನಾಥ್ ಶೆಟ್ಟಿ, ಪ್ರದೀಪ್ ದೇವಾಡಿಗ, ಬೆಳ್ಮಣ್ ಗ್ರಾಮ ಪಂ.ಸದಸ್ಯ ಅಜಿತ್ ಶೆಟ್ಟಿ ಉಪಸ್ಥಿತರಿದ್ದರು.
ಕೊಂಬಲಿಕೆ ಪ್ರಗತಿ ಪರ ಕ್ರಷಿಕರಾದ ಬೆನಡಿಕ್ಟ್ ಲೋಬೋ ರವರು ತಮ್ಮ ತೋಟದಲ್ಲಿ ಬೆಳೆಸಿದ ಕಾರ್ಲ ಬಿಳಿ ಬೆಂಡೆಯನ್ನು ಅವರ ಧರ್ಮ ಪತ್ನಿ ಶ್ರೀಮತಿ ರೆಜಿನಾ ಲೋಬೋರವರು ಸಚಿವರಿಗೆ ಕಾಣಿಕೆಯಾಗಿ ನೀಡಿದರು. ಜೇರಿ ಎಲ್ ಡಿಸೋಜ ಸ್ವಾಗತಿಸಿ, ಪ್ರದೀಪ್ ದೇವಾಡಿಗ ವಂದಿಸಿದರು. ಪಳ್ಳಿ ಗ್ರಾಮ ಪಂ ಸದಸ್ಯ ಶ್ರೀಕಾಂತ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.