ಸತ್ಯವತಿಯಾದ ಶಿಲ್ಪಾ ಶೆಟ್ಟಿ: ಧ್ರುವ ಸರ್ಜಾ ‘ಕೆ.ಡಿ’ಗೆ ಜೊತೆಯಾದ ಕರಾವಳಿ ಕುವರಿ

ಕರಾವಳಿ ಕುವರಿ ಶಿಲ್ಪಾ ಶೆಟ್ಟಿ ಬಾಲಿವುಡ್‌ನ‌ಲ್ಲಿ ನೆಲೆ ನಿಂತು ಸ್ಟಾರ್‌ ನಟಿಯಾಗಿ ಮೆರೆದಿದ್ದು ನಿಮಗೆ ಗೊತ್ತೇ ಇದೆ. ಸಿನಿಮಾ ಜೊತೆಗೆ ಫಿಟ್‌ನೆಸ್‌, ಯೋಗ ಮೂಲಕವೂ ಹೆಸರು ಮಾಡಿರುವ ಶಿಲ್ಪಾ ಯಾವುದೇ ವಿವಾದಕ್ಕೂ ಕುಗ್ಗದೇ, ಜಗ್ಗದೇ ಮುಂದೆ ಹೋಗುತ್ತಿದ್ದಾರೆ.

ಸದ್ಯ ಶಿಲ್ಪಾ ಶೆಟ್ಟಿ ಪ್ರೇಮ್‌ ನಿರ್ದೇಶನದ “ಕೆಡಿ’ ಚಿತ್ರದಲ್ಲಿ ನಟಿಸಿದ್ದು, ಯುಗಾದಿ ಹಬ್ಬದ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಪಾತ್ರವನ್ನು ಅನಾವರಣಗೊಳಿಸಿದೆ. ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಸತ್ಯವತಿ ಎಂಬ ಪಾತ್ರ ಮಾಡುತ್ತಿದ್ದಾರೆ. ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿರುವ ಅವರ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಶಿಲ್ಪಾ ಶೆಟ್ಟಿ ಈಗಾಗಲೇ ಕನ್ನಡದ “ಪ್ರೀತ್ಸೋದ್‌ ತಪ್ಪಾ’ ಹಾಗೂ “ಆಟೋ ಶಂಕರ್‌’ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಪ್ರೇಮ್‌ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಶಿಲ್ಪಾ ನಟಿಸುತ್ತಿರುವ ಮೂರನೇ ಕನ್ನಡ ಸಿನಿಮಾ. ಈ ಚಿತ್ರದಲ್ಲಿ ಶಿಲ್ಪಾ ಅಲ್ಲದೇ, ಬಾಲಿವುಡ್‌ ನ ಮತ್ತೂಬ್ಬ ಸ್ಟಾರ್‌ ನಟ ನಟಿಸಿದ್ದಾರೆ. ಅದು ಸಂಜಯ್‌ ದತ್‌.

ಹೌದು, ಈಗಾಗಲೇ “ಕೆಜಿಎಫ್-2′ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅದ್ಧೂರಿ ಎಂಟ್ರಿಕೊಟ್ಟಿದ್ದ ಸಂಜಯ್‌ ದತ್‌ ಈಗ “ಕೆಡಿ’ಯಲ್ಲೂ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಇನ್ನು, ಪ್ರೇಮ್‌ ಹಾಗೂ ಧ್ರುವ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಚಿತ್ರ ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ನಿಂದ ಕೂಡಿದ್ದು, ಪ್ರೇಮ್‌ ಈ ಬಾರಿ ದೊಡ್ಡ ಮಟ್ಟದಲ್ಲಿ ಗೆಲ್ಲಲು ಹೊರಟಿದ್ದಾರೆ. ಚಿತ್ರವನ್ನು ಕೆವಿಎನ್‌ ಸಂಸ್ಥೆ ನಿರ್ಮಿಸುತ್ತಿದೆ.

You cannot copy content from Baravanige News

Scroll to Top