ಉಡುಪಿ: ಮಾನಸ ಪುನರ್ವಸತಿ ಹಾಗೂ ತರಬೇತಿ ಕೇಂದ್ರ ಪಾಂಬೂರು ಮಾನಸ ಆಟಿಸಂ ಸೆಂಟರ್ ಹಾಗೂ ಆಟಿಸಂ ಸೊಸೈಟಿ ಆಫ್ ಉಡುಪಿ ಇದರ ಜಂಟಿ ಆಶ್ರಯದಲ್ಲಿ ‘ವಿಶ್ವ ಆಟಿಸಂ ಅರಿವು ದಿನಾಚರಣೆ’ ಮಾ.30 ರಂದು ಪಾಂಬೂರು ಮಾನಸ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕರು, ಖ್ಯಾತ ಮನಶಾಸ್ತ್ರಜ್ಞರು ಹಾಗೂ ಆಟಿಸಂ ಸೊಸೈಟಿ ಆಫ್ ಉಡುಪಿಯ ಸ್ಥಾಪಕಾಧ್ಯಕ್ಷರಾದ ಡಾ.ಪಿ.ವಿ. ಭಂಡಾರಿ ರವರು ನೆರವೇರಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ಅನಿರ್ವೇದಾ ರಿಸೋರ್ಸ್ ಸೆಂಟರ್ ಫೋರ್ ಸೈಕೊಲೊಜಿಕಲ್ ವೆಲ್ ಬಿಯಿಂಗ್ ನ ಡೈರೆಕ್ಟರ್ ಮತ್ತು ಸ್ಟಾಪಕರಾದ ಡಾ. ಕೆ.ಟಿ. ಶ್ವೇತ, ಮಣಿಪಾಲ್ ಮಾಹೆ, ಡಿಪಾರ್ಟ್ಮೆಂಟ್ ಆಫ್ ಸ್ವೀಜ್ & ಹಿಯರಿಂಗ್, ಎಂಸಿಎಚ್ ಪಿ ಯ ಸಹ ಪ್ರಾಧ್ಯಾಪಕಾರದ ಡಾ. ವೀಣಾ ರಾವ್, ಸಮಾಜ ಸೇವಕರು ಹಾಗೂ ವಿಶೇಷ ಮಕ್ಕಳ ಪೋಷಕರಾದ ಲಕ್ಷ್ಮೀ ಪ್ರಭು ರವರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.