ವಿದ್ಯಾರ್ಥಿ ಅನೀಶ್ ಗೆ ಬಾಲ ವಿಕಾಸ ಅಕಾಡೆಮಿಯ ರಾಜ್ಯ ಪ್ರಶಸ್ತಿ


ಪಡುಬಿದ್ರಿ : ಅದಮಾರು ಪೂರ್ಣಪ್ರಜ್ಞ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅನೀಶ್. ಬಿ ಗೆ ಮಕ್ಕಳ ಪುಸ್ತಕ ಚಂದಿರ ರಾಜ್ಯ ಪ್ರಶಸ್ತಿ ಲಭಿಸಿದೆ.

ಕರ್ನಾಟಕ ಸರ್ಕಾರ ಬಾಲ ವಿಕಾಸ ಅಕಾಡೆಮಿ ಕೊಡಮಾಡುವ 2020 ನೇ ಸಾಲಿನ ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಯ ಸಣ್ಣ ಕಥೆಗಳು ವಿಭಾಗದಲ್ಲಿ ಅನೀಶ್ ಬರೆದ ಹರಿವಿನ ಹರಿವು ಕಥಾ ಸಂಕಲನವು ಪ್ರಶಸ್ತಿ ಗೆ ಭಾಜನಗೊಂಡಿದೆ. ಇದೇ ಮಾರ್ಚ್ 27 ರಂದು ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಕೇಂದ್ರ ಕಛೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ₹ 15000 ನಗದು ಮತ್ತು ಸ್ಮರಣಿಕೆಯ ಪುರಸ್ಕಾರ ಒಳಗೊಂಡಿದೆ.

ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಯನ್ನು ಅದಮಾರು ಮಠದ ಪೂಜ್ಯ ಶ್ರೀ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಕಾಲೇಜಿನ ಆಡಳಿತ ಮಂಡಳಿ ,ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

You cannot copy content from Baravanige News

Scroll to Top