ಇಂದಿನಿಂದ ಐಪಿಎಲ್ ಅಬ್ಬರ : ಕ್ರಿಕೆಟ್‌ ದಿಗ್ಗಜರ ಸಮಾಗಮ

ಅಹ್ಮದಾಬಾದ್‌: ವನಿತೆಯರ ಐಪಿಎಲ್‌ ಬಳಿಕ ಇದೀಗ ಪುರುಷರ ಐಪಿಎಲ್‌ ಹೋರಾಟಕ್ಕೆ ವೇದಿಕೆ ಸಜ್ಜುಗೊಂಡಿದೆ.

16ನೇ ವರ್ಷದ ಐಪಿಎಲ್‌ ಶುಕ್ರವಾರ ಆರಂಭಗೊಳ್ಳಲಿದೆ. 7.30ಕ್ಕೆ ಉದ್ಘಾಟನಾ ಪಂದ್ಯ ನಡೆಯುವ ಒಂದು ಗಂಟೆ ಮೊದಲು ವೈಭವದ ಉದ್ಘಾಟನಾ ಸಮಾರಂಭ ನಡೆಯಲಿದೆ.

ಸಿನೆಮಾ ತಾರೆಯರು ಆಕರ್ಷಣೆಯ ಬಿಂದುವಾಗಿದ್ದಾರೆ.

ಕ್ರಿಕೆಟ್‌ ದಿಗ್ಗಜರಾದ ಧೋನಿ, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಸಹಿತ ಹಿರಿಯ, ಕಿರಿಯ ಆಟಗಾರರ ಸಹಿತ ವಿದೇಶಿ ಆಟಗಾರರು ಜತೆಯಾಗಿ ಇಲ್ಲಿ ಆಡುವುದು ವಿಶೇಷ. ಶುಕ್ರವಾರದಿಂದ 2 ತಿಂಗಳು ಕ್ರಿಕೆಟ್‌ ಹಬ್ಬದ ವಾತಾವರಣ ಇರಲಿದೆ.

Scroll to Top