ಮಂಗಳೂರು – ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಮೈಸೂರು ಮೂಲದ ಕುಟುಂಬ…!!

ಮಂಗಳೂರು (ಮಾರ್ಚ್ 31) : ಮಂಗಳೂರು ನಗರದ ಕೆ ಎಸ್ ರಾವ್ ರಸ್ತೆಯಲ್ಲಿನ ಲಾಡ್ಜ್ ಒಂದರಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡವರು ಮೈಸೂರಿನ ವಾಣಿ ವಿಲಾಸದವರೆಂದು ತಿಳಿದು ಬಂದಿದ್ದು , ಪಕ್ಕದಲ್ಲೇ ಡೆತ್ ನೋಟ್ ಕೂಡ ಪತ್ತೆಯಾಗಿದೆ ಎನ್ನಲಾಗಿದೆ.


ಮೃತರನ್ನು ಮೈಸೂರಿನ ವಾಣಿ ವಿಲಾಸ ಬಡಾವಣೆಯ ದೇವೆಂದ್ರಪ್ಪ, ಅವರ ಪತ್ನಿ ನಿರ್ಮಲಾ ಮತ್ತು ಅವರ ಅವಳಿ ಮಕ್ಕಳಾದ ಚೈತ್ರಾ ಮತ್ತು ಚೈತ್ರಿಯಾ ಎಂದು ಗುರುತ್ತಿಸಲಾಗಿದೆ.

ಆರ್ಥಿಕ ಮುಗ್ಗಟ್ಟಿನಿಂದ ಈ ಕುಟುಂಬ ಮಂಗಳೂರಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

ದೇವೇಂದ್ರಪ್ಪ ಪತ್ನಿ ಮತ್ತು ಮಕ್ಕಳಿಗೆ ಮೊದಲು ವಿಷ ಉಣಿಸಿ ಬಳಿಕ ತಾನು ನೇಣಿಗೆ ಕೊರಳೊಡ್ಡಿದ್ದಾನೆ. ಸಾವಿಗೂ ಮುನ್ನ ಡೆತ್ ನೋಟನ್ನು ಬರೆದಿದ್ದು ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂದರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಮೃತರ ಕುಟುಂಬಸ್ಥರನ್ನು ಸಂಪರ್ಕಿಸುವ ಪ್ರಯತ್ನ ನಡೆಸಲಾಗುತ್ತಿದೆ.

You cannot copy content from Baravanige News

Scroll to Top