ಶಿರ್ವ (ಏ.2): ಕಾಡಿಗೆ ಬೆಂಕಿ ಬಿದ್ದ ಘಟನೆ ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜು ಸಮೀಪ ನಡೆದಿದೆ.
ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನ ಪಕ್ಕದ ಕಾಡಿಗೆ ಬೆಂಕಿ ಬಿದ್ದಿದ್ದು, ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕದಳದವರು ಹರಸಾಹಸ ಪಡುತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆ ಹಲವು ಕಡೆಗಳಿಗೆ ಪಸರಿಸಿದ್ದು, ಬೆಂಕಿ ಹತೋಟಿಗೆ ಬರುತ್ತಿಲ್ಲ.
ಉಡುಪಿ ಅಗ್ನಿಶಾಮಕ ದಳದ ಮೀರ್ ಮಹಮ್ಮದ್ ಗೌಸ್ ಮತ್ತು ಅವರ ತಂಡ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟರು.
ಶಿರ್ವ ಪೋಲಿಸ್ ಠಾಣೆಯ ಅನಿಲ್ ಕುಮಾರ್ ನಾಯಕ್ ಮತ್ತು ಸಿಬ್ಬಂದಿ, ಕಾಲೇಜಿನ ಪ್ರಾಂಶುಪಾಲ ತಿರುಮಲೇಶ್ವರ ಭಟ್, ಗ್ರಾಮ ಪಂಚಾಯತ್ ಸದಸ್ಯ ಕೆ ಆರ್ ಪಾಟ್ಕರ್, ಜ್ಯೋತಿ ಫ್ರೆಂಡ್ಸ್ ಕ್ಲಬ್ ನ ಸದಸ್ಯರು, ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳು, ಸ್ಥಳೀಯರಾದ ರಾಘವೇಂದ್ರ ನಾಯಕ್, ವಿರೇಂದ್ರ ಪಾಟ್ಕರ್, ಅನಂತರಾಮ ವಾಗ್ಲೆ ಮುಂತಾದವರು ಸ್ಥಳದಲ್ಲಿ ಉಪಸ್ಥಿತರಿದ್ದು ಬೆಂಕಿ ನಂದಿಸಲು ಸಹಕರಿಸಿದರು.
ಅದಾನಿ ಸಂಸ್ಥೆಯವರ ಅಗ್ನಿಶಾಮಕ ದಳದ ವಾಹನಗಳೂ ಬಂದು ಬೆಂಕಿ ಅರಿಸುವಲ್ಲಿ ಸಹಕರಿಸಿದರು.