ಬೆಂಗಳೂರು (ಎ.3) : ಇದು ವಿಚಿತ್ರದಲ್ಲೇ ವಿಚಿತ್ರ ಪ್ರಕರಣ. ಬೆಂಗಳೂರಿನ ಮಹಿಳೆಯೊಬ್ಬರು ನನ್ನ ಗಂಡ ಲಿಪ್ ಸ್ಟಿಕ್ ಹಚ್ಚಿಕೊಳ್ತಾರೆ. ಫಸ್ಟ್ ನೈಟ್‌ನಲ್ಲೂ ಕನ್ನಡಿ ಮುಂದೆ ಲಿಪ್ ಸ್ಟಿಕ್ ಹಾಕಿಕೊಂಡು ನಿಂತಿದ್ದ. ಮಹಿಳೆಯರ ಒಳ ಉಡುಪು ಧರಿಸಿ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಗಂಡ, ಹೆಂಡತಿ ಜಗಳದ ಕೇಸ್ ದಾಖಲಾಗಿದೆ. 25 ವರ್ಷದ ಮಹಿಳೆ ದೂರಿನ ಮೇರೆಗೆ ಪತಿ ಪ್ರಣವ್, ಮಾವ ಮೂರ್ತಿ ಹಾಗೂ ಅತ್ತೆ ಶ್ರೀದೇವಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳೆದ ಮೂರು ವರ್ಷಗಳ ಹಿಂದೆ ದೂರು ಕೊಟ್ಟ ಮಹಿಳೆಗೆ ಮ್ಯಾಟ್ರಿಮೋನಿಯಲ್ಲಿ ಪ್ರಣವ್ ಪರಿಚಯವಾಗಿದ್ದ. ತಾನು ಎಂಟೆಕ್ ಮಾಡಿದ್ದು ಒಳ್ಳೆ ಕೆಲಸದಲ್ಲಿ ಇರುವುದಾಗಿ ಹೇಳಿದ್ದ. 2020ರಲ್ಲಿ ಕುಟುಂಬಸ್ಥರ ಆಶೀರ್ವಾದದೊಂದಿಗೆ ಮದುವೆಯಾಗಿತ್ತು. ಇದೇ ವೇಳೆ ವರದಕ್ಷಿಣೆ ರೂಪವಾಗಿ 800 ಗ್ರಾಂ ಚಿನ್ನ, ಒಂದು ಕೆ.ಜಿ. ಬೆಳ್ಳಿ ಹಾಗೂ ಐದು ಲಕ್ಷ ರೂಪಾಯಿ ಹಣ ನೀಡಲಾಗಿತ್ತು.
ಮದುವೆಯಾದ ಮೇಲೆ ಫಸ್ಟ್ ನೈಟ್‌ನಲ್ಲಿ ತನ್ನ ಗಂಡ ಕನ್ನಡಿ ಮುಂದೆ ನಿಂತು ಲಿಪ್ ಸ್ಟಿಕ್ ಹಾಕಿಕೊಂಡಿದ್ದ. ಬಳಿಕ ಮಹಿಳೆಯರ ಒಳ ಉಡುಪು ಧರಿಸಿದ್ದ. ಇದನ್ನ ಪ್ರಶ್ನಿಸಿದರೆ ತನಗೆ ಗಂಡಸರು ಎಂದರೆ ತುಂಬಾ ಇಷ್ಟ ಎಂದಿದ್ದಾರಂತೆ. ಇದೇ ವಿಚಾರವಾಗಿ ಮನೆಯಲ್ಲಿ ಜಗಳವಾಗುತಿತ್ತು.
ಪ್ರತಿದಿನ ಪತಿಯ ವಿಚಿತ್ರ ವರ್ತನೆ ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ತೋರಿಸಲು 10 ಲಕ್ಷ ರೂಪಾಯಿ ತೆಗೆದುಕೊಂಡು ಬರುವಂತೆ ಪೀಡಿಸುತ್ತಿದ್ದರು. ಕಿರುಕುಳ ತಾಳಲಾರದೆ ಮನೆಯಿಂದ ಹೊರಬಂದು ಸೋದರಮಾವನ ಮನೆಯಲ್ಲಿ ವಾಸ್ತವ್ಯ ಇದೆ. ಇಷ್ಟಾದರೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಅತ್ತೆ-ಮಾವ ಸಹ ತನಗೆ ಜಿರಳೆ ಔಷಧಿ ಸಿಂಪಡಿಸಿ ಅನಾರೋಗ್ಯಕ್ಕೆ ಕಾರಣವಾಗಿದ್ದರು ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. ಆರೋಪಿ ಗಂಡ ಹಾಗೂ ಆತನ ಮನೆಯವರ ವಿರುದ್ದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.