‘ಕಾಂತಾರ’ ಪಂಜುರ್ಲಿ ದೈವದ ವೇಷ ಧರಿಸಿ ಆರ್.ಸಿ.ಬಿ ಪಂದ್ಯ ವೀಕ್ಷಣೆ ಮಾಡಿದ ಅಭಿಮಾನಿ : ಆಕ್ರೋಶ

ಕಾಂತಾರ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾ. ಪ್ಯಾನ್ ಇಂಡಿಯಾ ರಿಲೀಸ್ ಆಗುವ ಮೂಲಕ ಅಭಿಮಾನಿಗಳ ಮನಗೆದ್ದ ಚಲನಚಿತ್ರ. ಈ ಸಿನಿಮಾವನ್ನು ಇಂದಿಗೂ ಹಾಡಿಹೊಗಳುವ ಜನರಿದ್ದಾರೆ. ಈ ಸಿನಿಮಾವನ್ನು ಇಷ್ಟಪಟ್ಟು ಮೈಗೂಡಿಸಿಕೊಂಡವರು ಇದ್ದಾರೆ. ನಿನ್ನೆ ನಡೆದ ಆರ್ಸಿಬಿ ಪಂದ್ಯದಲ್ಲೂ ಕಾಂತಾರದಲ್ಲಿ ಬರುವ ಪಂಜುರ್ಲಿ ದೈವದ ವೇಷವನ್ನು ಧರಿಸಿ ಕ್ರಿಕೆಟ್ ನೋಡುತ್ತಾ ಎಂಜಾಯ್ ಮಾಡುತ್ತಿರುವ ವ್ಯಕ್ತಿಯೊಬ್ಬರು ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ.

ಸದ್ಯ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಿನ್ನೆ ನಡೆದ ಪಂದ್ಯದಲ್ಲಿ ಆರ್ಸಿಬಿ ಫ್ಯಾನ್ ಪಂಜುರ್ಲಿ ದೈವದ ವೇಷ-ಭೂಷಣ ಧರಿಸಿಕೊಂಡು ಪಂದ್ಯ ನೋಡುತ್ತಾ ಎಂಜಾಯ್ ಮಾಡಿದ್ದಾರೆ. ಈ ಫೋಟೋವನ್ನು ಆರ್ಸಿಬಿ ಟ್ವಿಟ್ಟರ್ ಖಾತೆಯೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಅನೇಕರು ಆರ್ಸಿಬಿ ಪಂದ್ಯದ ವೇಳೆ ಪಂಜುರ್ಲಿ ದೈವದ ವೇಷ ಧರಿಸಿರುವ ವ್ಯಕ್ತಿಯನ್ನು ಕಂಡು ಕಾಂತಾರವೆಂದು ಹೊಗಳಿದರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಪಂಜುರ್ಲಿ ದೈವದ ರೀತಿ ವೇಷ ಧರಿಸಿರುವುದಕ್ಕೆ ಕರಾವಳಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಕಾಂತಾರದ ಸಿನೆಮಾದಿಂದಾಗಿ ಇತ್ತೀಚೆಗೆ ಕರಾವಳಿಯ ದೈವಾರಾಧನೆಯನ್ನು ಅಣಕಿಸುವವರು ಸಂಖ್ಯೆ ಹೆಚ್ಚಾಗಿದೆ.

You cannot copy content from Baravanige News

Scroll to Top