ಟ್ವಿಟರ್‌ಗೆ ಮತ್ತೆ ಮರಳಿದ ನೀಲಿ ಹಕ್ಕಿ – ನಾಪತ್ತೆಯಾಯ್ತು ನಾಯಿ ಮುಖ

ಸ್ಯಾನ್‌ ಫ್ರಾನ್ಸಿಸ್ಕೊ, (ಏ 07): ಕೆಲವೇ ದಿನಗಳ ಹಿಂದೆಯಷ್ಟೇ ಟ್ವಿಟರ್‌ನ ಸಿಇಒ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ನ ಲೋಗೊದಲ್ಲಿ ನೀಲಿ ಹಕ್ಕಿಯ ಚಿತ್ರವನ್ನೇ ತೆಗೆದು ಹಾಕಿ ಅದರ ಬದಲಿಗೆ ಡಾಗ್‌ ಕಾಯಿನ್‌ ಎಂಬ ಕ್ರಿಪ್ಟೊ ಕರೆನ್ಸಿ ಮೇಲಿರುವ ನಾಯಿಯ ಮೀಮ್ಸ್‌ ಚಿತ್ರವನ್ನು ಟ್ವಿಟರ್‌ನ ಲೋಗೊವಾಗಿ ಬಳಸಿದ್ದರು. ಆದರೆ ಇದೀಗ ನಾಯಿ ಮುಖದ ಲೋಗೋ ಮತ್ತೆ ನಾಪತ್ತೆಯಾಗಿ ನೀಲಿ ಹಕ್ಕಿಯನ್ನೇ ಬಳಸಲಾಗಿದೆ.


2013ರಲ್ಲಿ ಜೋಕ್‌ನಂತೆ ಸೃಷ್ಟಿಯಾದ ಡಾಗ್‌ ಕಾಯಿನ್‌ ಬಳಿಕ ವ್ಯಾಪಕವಾಗಿ ಬಳಕೆಯಾಗಿ ಜನಪ್ರಿಯವಾಗಿದ್ದು, ಟೆಸ್ಲಾದಲ್ಲೂ ಡಾಗ್‌ ಕಾಯಿನ್‌ ಅನ್ನು ಬಳಸಲಾಗುತ್ತಿತ್ತು.

ಇನ್ನು ಬಿಟ್ಕಾಯಿನ್ ಮತ್ತು ಇನ್ನಿತರ ಕ್ರಿಪ್ಟೋಕರೆನ್ಸಿಗಳ ವಿರುದ್ಧ ಜೋಕ್ ಮಾಡಲು 2013ರಲ್ಲಿ ಬಿಲ್ಲಿ ಮಾರ್ಕಸ್, ಜಾಕ್ಸನ್ ಪಾಮರ್ ಎಂಬುವರು ಡಾಗ್ಕಾಯಿನ್ ಕ್ರಿಪ್ಟೋಕರೆನ್ಸಿ ಹೊರತಂದಿದ್ದಾರೆ.

ಈ ಡಾಗ್ಕಾಯಿನ್ಗೆ 2021ರಲ್ಲಿ ಎಲಾನ್ ಮಸ್ಕ್ ಅವರು ಉತ್ತೇಜನ ನೀಡಿ ಈ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವಂತೆ ತಮ್ಮ ಟೆಸ್ಲಾ ಕಂಪನಿಯ ಉದ್ಯೋಗಿಗಳಿಗೂ ಶಿಫಾರಸು ಮಾಡಿದ್ದರು.

Scroll to Top