ಈ ಮೂವರಿಗೆ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಟಿಕೆಟ್ ಖಚಿತ..!!

ಮಂಗಳೂರು,ಏ.09: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ತಿಂಗಳಷ್ಟೆ ಬಾಕಿ ಇದೆ. ಆದರೆ ಬಿಜೆಪಿಯಿಂದ ಇನ್ನೂ ಅಭ್ಯರ್ಥಿಗಳ ಘೋಷಣೆಯಾಗಿಲ್ಲ. ಈ ಬಾರಿ ಬಿಜೆಪಿ ಹಲವು ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ಇರಲು ನಿರ್ಧರಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಏಳು ಶಾಸಕರಿದ್ದಾರೆ. ಇದರಲ್ಲಿ ಇಬ್ಬರು ಶಾಸಕರು ಟಿಕೆಟ್ ಕಳೆದುಕೊಳ್ಳುವುದು ಖಚಿತ. ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಸಚಿವ, ಸುಳ್ಯ ಶಾಸಕ ಅಂಗಾರ ಟಿಕೆಟ್ ಕಳೆದುಕೊಳ್ಳುವುದು ಖಚಿತ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇನ್ನುಳಿದ ಐದು ಶಾಸಕರಲ್ಲಿ ಮೂವರಿಗೆ ಟಿಕೆಟ್ ಖಚಿತವಾಗಿದೆ ಎಂದು ತಿಳಿದುಬಂದಿದೆ. ಆ ಮೂವರು ಯಾರು ಎಂಬುದನ್ನು ನೋಡೋಣ

ವೇದವ್ಯಾಸ ಕಾಮತ್

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರಿಗೆ ಈ ಬಾರಿ ಟಿಕೆಟ್ ಖಚಿತವಾಗಿದೆ ಎಂದು ತಿಳಿದುಬಂದಿದೆ. ವೇದವ್ಯಾಸ ಕಾಮತ್ ಅವರು ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ. 2018 ರಲ್ಲಿ ಕಾಂಗ್ರೆಸ್ ಶಾಸಕ ಜೆ ಆರ್ ಲೋಬೋ ಅವರನ್ನು ಸೋಲಿಸಿ ವೇದವ್ಯಾಸ ಕಾಮತ್ ಗೆಲುವು ಸಾಧಿಸಿದ್ದರು. ಈ ಬಾರಿಯು ವೇದವ್ಯಾಸ ಕಾಮತ್ ಗೆ ಟಿಕೆಟ್ ಖಚಿತ ಎಂದು ತಿಳಿದು ಬಂದಿದೆ.

ಹರೀಶ್ ಪೂಂಜಾ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೂಡ ಬಿಜೆಪಿ ಟಿಕೆಟ್ ಖಚಿತ ಎಂದು ತಿಳಿದುಬಂದಿದೆ. ಹರೀಶ್ ಪೂಂಜಾ ಯುವ ಶಾಸಕರಾಗಿದ್ದು ಎರಡನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹರೀಶ್ ಪೂಂಜಾ 2018 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದರು. ಬಿಜೆಪಿ ಹೈಕಮಾಂಡ್ ಈ ಬಾರಿಯು ಹರೀಶ್ ಪೂಂಜಾ ಗೆ ಟಿಕೆಟ್ ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ರಾಜೇಶ್ ನಾಯ್ಕ

ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ ಅವರಿಗೂ ಈ ಬಾರಿ ಟಿಕೆಟ್ ಖಚಿತ ಎಂಬುದು ತಿಳಿದುಬಂದಿದೆ. ರಾಜೇಶ್ ನಾಯ್ ಕೂಡ ಎರಡನೇ ಅವಧಿಗೆ ಶಾಸಕರಾಗಲು ಅದೃಷ್ಟ ಪರೀಕ್ಷೆ ಗಿಳಿದಿದ್ದಾರೆ. ಅವರು 2018 ರಲ್ಲಿ ಸಚಿವ ರಮನಾಥ ರೈ ಅವರನ್ನು ಸೋಲಿಸಿದ್ದರು. ಈ ಬಾರಿಯು ರಾಜೇಶ್ ನಾಯ್ಕ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

Scroll to Top