ಬಾಲಕನಿಗೆ ಮುತ್ತಿಟ್ಟು, ತಮ್ಮ ನಾಲಿಗೆ ಚೀಪುವಂತೆ ಹೇಳಿದ ದಲೈ ಲಾಮಾ: ನೆಟ್ಟಿಗರು ಗರಂ

ಟಿಬೆಟಿಯನ್ ಧರ್ಮಗುರು ದಲೈಲಾಮಾ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಬಾಲಕೊಬ್ಬನ ಬಾಯಿಗೆ ಮುತ್ತಿಟ್ಟು ತನ್ನ ನಾಲಿಗೆಯನ್ನು ಚೀಪುವಂತೆ ಹೇಳಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ. ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಬಂದಿದ್ದ ಭಾರತೀಯ ಬಾಲಕನಿಗೆ ಮುತ್ತಿಟ್ಟು ನೀನು ನನ್ನ ನಾಲಿಗೆ ಚೀಪುವೆಯಾ ಎಂದು ದಲೈಲಾಮಾ ಕೇಳಿದ್ದರು.

ಈ ವೀಡಿಯೋವನ್ನು ಜೂಸ್ಟ್ ಬ್ರೋಕರ್ ಎಂಬ ಟ್ವಿಟ್ಟರ್ ಬಳಕೆದಾರ ಹಂಚಿಕೊಂಡಿದ್ದು, ದಲೈಲಾಮಾರ ಈ ವರ್ತನೆಗೆ ಹಿಂದಿನ ಉದ್ದೇಶವೇನೆಂದು ಎಲ್ಲರೂ ಪ್ರಶ್ನಿಸಿದ್ದಾರೆ. ಅನೇಕರು ಈ ವರ್ತನೆಯನ್ನು ಕಟುವಾಗಿ ಟೀಕಿಸಿದ್ದಾರೆ.

ದೇಶದಲ್ಲಿ ಮಕ್ಕಳ ಕೆನ್ನೆಗೆ ಮುತ್ತು ಕೊಡುವುದು ಆಕ್ಷೇಪಾರ್ಹವಲ್ಲ ಆದರೆ ಭಾರತೀಯ ಸಂಪ್ರದಾಯವಾದಿಗಳು ಸಾರ್ವಜನಿಕವಾಗಿ ಚುಂಬಿಸುವುದನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಇದು ಸಾಮಾನ್ಯವೇ ಆಗಿರಬಹುದು. ಆದರೆ ಅಲ್ಲಿಯೂ ಕೂಡ ಹಿರಿಯರಿಗೆ ಸೀಮಿತವಾಗಿದೆ.

ಬೌದ್ಧರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಗುವೊಂದು ದಲೈಲಾಮಾ ಅವರನ್ನು ಅಪ್ಪಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿತ್ತು ಎಂದು ಹೇಳಲಾಗಿದೆ. ನಂತರ ದಲೈಲಾಮಾ ಮಗುವನ್ನು ಕರೆದರು. ಮಗುವಿನೊಂದಿಗೆ ಮಾತನಾಡುವಾಗ, ದಲೈ ಲಾಮಾ ಮೊದಲು ಅವನ ತುಟಿಗಳನ್ನು ಚುಂಬಿಸಿದರು ಮತ್ತು ನಂತರ ಅವರ ನಾಲಿಗೆಯನ್ನು ಹೊರತೆಗೆದು ನನ್ನ ನಾಲಿಗೆಯನ್ನು ನೆಕ್ಕುವಂತೆ ಹೇಳಿದ್ದರು.


ವೀಡಿಯೋ ವೈರಲ್ ಆದ ನಂತರ ಟೀಕೆಗೆ ಗುರಿಯಾಗಿರುವ ದಲೈ ಲಾಮಾ ಅವರ ಅನುಯಾಯಿಯೊಬ್ಬರು ಅವರು ಬೌದ್ಧ ಸನ್ಯಾಸಿ ಹುಡುಗನೊಂದಿಗೆ ತಮಾಷೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋಗೆ ಟ್ವಿಟರ್ ಬಳಕೆದಾರರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

Scroll to Top