ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಅಖಾಡಕ್ಕೆ ಇಂದು ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಇದೀಗ ದೆಹಲಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬೊಮ್ಮಾಯಿ, ಇವತ್ತು ಮೊದಲ ಪಟ್ಟಿಯು ಬಿಡುಗಡೆ ಆಗಲ್ಲ. ನಾಳೆ ಅಥವಾ ನಾಡಿದ್ದು ಆಗುವ ಸಾಧ್ಯತೆ ಇದೆ ಎಂದಿದ್ದಾರೆ.
ಈ ಮೂಲಕ ಇವತ್ತು ತಮ್ಮ ಹೆಸರು ಪ್ರಕಟವಾಗಲಿದೆ ಎಂದು ಕುತೂಹಲದಿಂದ ಕಾಯುತ್ತಿದ್ದ ಆಕಾಂಕ್ಷಿತರಿಗೆ ನಿರಾಸೆ ಆಗಿದೆ. ಇನ್ನು ಪಟ್ಟಿ ಬಿಡುಗಡೆಯು ಯಾಕೆ ವಿಳಂಬವಾಗುತ್ತಿದೆ ಅಂತಾ ನೋಡೋದಾದ್ರೆ, ಬಿಜೆಪಿ ಹೈಕಮಾಂಡ್ ಮತ್ತೊಮ್ಮೆ ಸರ್ವೆಗೆ ಸೂಚನೆ ನೀಡಿದ್ಯಂತೆ.
ಮಾಹಿತಿಗಳ ಪ್ರಕಾರ, ಮೊನ್ನೆ ರಾತ್ರಿ ಕೆಲವು ಕ್ಷೇತ್ರಗಳನ್ನು ಮತ್ತೆ ಸರ್ವೆ ಮಾಡಲು ಹೈಕಮಾಂಡ್ ಸೂಚನೆಯಂತೆ, ಬೊಮ್ಮಾಯಿ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಈ ಮೂಲಕ ಮೂರು ಸಂಸ್ಥೆಗಳಿಂದ ಪ್ರತ್ಯೇಕ ಸರ್ವೆ ನಡೆಸಿ, ಅದರ ಆಧಾರದ ಮೇಲೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದ್ಯಂತೆ.
ಕೆಲವು ಮಾಹಿತಿಗಳ ಪ್ರಕಾರ, ಇಂದು ಸಂಜೆ ಒಳಗೆ ಮೂರು ಸರ್ವೆಯ ವರದಿ ಹೈಕಮಾಂಡ್ಗೆ ಸೇರಲಿದೆ. ವರದಿಯನ್ನು ಇಟ್ಟುಕೊಂಡು ಹಿರಿಯ ನಾಯಕರು ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಅದಾದ ಬಳಿಕ ಟಿಕೆಟ್ ಫೈನಲ್ ಮಾಡಲಿದ್ದಾರೆ.