ಮುಸ್ಲಿಂ ಮೀಸಲಾತಿ ರದ್ದಿಗೆ ಸುಪ್ರೀಂಕೋರ್ಟ್ ಅಸಮಾಧಾನ

ನವದೆಹಲಿ, ಏ.13: ಇತ್ತೀಚಿಗೆ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ. ಶೇಕಡಾ 4ರಷ್ಟು ಮುಸ್ಲಿಂ ಮೀಸಲಾತಿ ರದ್ದು ಕಾನೂನು ಬಾಹಿರ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರದ ಮೀಸಲಾತಿ ಪರಿಷ್ಕರಣೆಯ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆ ವೇಳೆ ಕರ್ನಾಟಕ ರಾಜ್ಯ ಸರ್ಕಾರದ ಮೀಸಲಾತಿಯ ಪರಿಷ್ಕರಣೆ ದೋಷಪೂರಿತ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.

ಶೇಕಡಾ 4ರ ಮುಸ್ಲಿಂ ಮೀಸಲಾತಿ ರದ್ದು ಮೇಲ್ನೋಟಕ್ಕೆ ಸಂಪೂರ್ಣ ಊಹೆಯಿಂದ ಕೂಡಿದೆ. ಒಕ್ಕಲಿಗ, ಲಿಂಗಾಯತ ಮೀಸಲಾತಿ ಹೆಚ್ಚಳ ಕೂಡ ದೋಷಪೂರಿತ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಅಲ್ಲದೇ ಕರ್ನಾಟಕ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಚಾಟಿ ಬೀಸಿರೋ ಸುಪ್ರೀಂಕೋರ್ಟ್, ಏಪ್ರಿಲ್ 18ರವರೆಗೆ ಮುಸ್ಲಿಂ ಸಮುದಾಯದ ಶೇಕಡಾ 4ರಷ್ಟು ಹಾಗೂ ಒಬಿಸಿ ಮೀಸಲಾತಿ ರದ್ದು ಆಧಾರದ ಮೇಲೆ ದಾಖಲಾತಿ, ನೇಮಕಾತಿ ಮಾಡಬಾರದು ಎಂದು ಸೂಚಿಸಿದೆ. ಈ ಮೀಸಲಾತಿ ಪರಿಷ್ಕರಣೆ ವಿರುದ್ಧ ಹಿರಿಯ ವಕೀಲ ದುಷ್ಯಂತ್, ರವಿವರ್ಮ ಕುಮಾರ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ.

Scroll to Top