ಕಾರ್ಕಳ: ಬಾವಿಯಲ್ಲಿ ಸಿಲುಕಿಕೊಂಡ ಯುವಕನ ರಕ್ಷಣೆ

ಕಾರ್ಕಳ, ಏ 17: ಸ್ವಚ್ಚಗೊಳಿಸಲೆಂದು ಬಾವಿಗೆ ಇಳಿದು ಮೇಲೆ ಹತ್ತಲು ಸಾಧ್ಯವಾಗದೇ ಇದ್ದ ಯುವಕನೊ ಬ್ಬನನ್ನು ಅಗ್ನಿಶಾಮಕ ದಳವು ರಕ್ಷಿಸಿದ ಘಟನೆ ನಗರದ ಬಂಡೀಮಠ ಪರಿಸರದಲ್ಲಿ ನಡೆದಿದೆ.

ಬಂಡಿಮಠ ಬಳಿ ಗೋಪನಾಥ ಪುರಾಣಿಕ್ ರವರಿಗೆ ಸೇರಿದ ಬಾವಿಯಲ್ಲಿ ಪವನ್ ಪೂಜಾರಿ(32)ಎಂಬವರು ಸಿಲುಕಿಕೊಂಡಿದ್ದರು.ಅವರು ಬಾವಿಯ ಸ್ವಚತೆಗಾಗಿ ಇಳಿದು ,ಮೇಲಕ್ಕೆ ಬರಲಾಗದೇ ಅಶಕ್ತರಾಗಿ ಉಳಿದುಕೊಂಡಿದ್ದಾರೆಂಬ ಮಾಹಿತಿಯು ಅಗ್ನಿಶಾಮಕ ದಳಕ್ಕೆ ತಲುಪಿತು.ಅದರ ಹಿನ್ನಲೆಯಲ್ಲಿ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ.

ವ್ಯಕ್ತಿಯನ್ನು ಬಾವಿಯಿಂದ ಮೇಲೆಕ್ಕೆ ಎತ್ತಿ ಪ್ರಾಣ ರಕ್ಷಣೆ ಮಾಡಿರುತ್ತಾರೆ. ಕಾರ್ಯಾಚರಣೆಯಲ್ಲಿ , ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಬಿ ಎಂ ಸಂಜೀವ್, ಸಿಬ್ಬಂದಿಗಳಾದ ಹರಿಪ್ರಸಾದ್ ಶೆಟ್ಟಿಗಾರ್, ಜಯಮೂಲ್ಯ, , ನಿತ್ಯಾನಂದ ಬಸವರಾಜ್, ಭೀಮಪ್ಪ ಪಾಲ್ಗೊಂಡಿದ್ದರು.

You cannot copy content from Baravanige News

Scroll to Top