ಉಡುಪಿ, ಏ.17: ಪರವಾನಿಗೆ ಪಡೆಯದೆ ಹೊಟೇಲ್ನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಮಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಹೇಶ್ ಟಿ.ಎಂ. ಅವರು ಗಸ್ತು ನಿರತರಾಗಿದ್ದಾಗ ಆದಿ ಉಡುಪಿಯ ಶ್ರೀ ಸಾಯಿ ಫಿಶ್ಲ್ಯಾಂಡ್ ಹೊಟೇಲ್ನಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು.
ದಾಳಿ ನಡೆಸಿದಾಗ ಹೊಟೇಲ್ನಲ್ಲಿ ಮದ್ಯ ಸೇವಿಸುತ್ತಿದ್ದ ಗ್ರಾಹಕರು ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಹೊಟೇಲ್ ಮಾಲಕ ದಿನೇಶ್ ಪೂಜಾರಿ ಅವರಲ್ಲಿ ವಿಚಾರಿಸಿದಾಗ ಪರವಾನಿಗೆ ಇಲ್ಲ ಎಂದು ತಿಳಿಸಿದ್ದರು. ಅದರಂತೆ 4,805 ರೂ. ಮೌಲ್ಯದ 6.660 ಲೀ. ಮದ್ಯ ಹೊಂದಿರುವ 11 ಬಾಟಲಿ ಹಾಗೂ 510 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.