ಕಾಪು: ಗುರ್ಮೆ ಸುರೇಶ್ ಶೆಟ್ಟಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಗುರ್ಮೆ ಸುರೇಶ್ ಶೆಟ್ಟಿ (60) ಅಫಿದಾವತ್‌ನಲ್ಲಿ ಸಲ್ಲಿಸಿರುವ ಮಾಹಿತಿಯಂತೆ ಉದ್ಯಮಿಯೂ ಆಗಿರುವ ಅವರ ಒಟ್ಟು ಆದಾಯ 29.49 ಕೋಟಿ ರೂ.ಗಳಾಗಿವೆ.
ಆದಾಯ 29.49 ಕೋಟಿ ರೂ. ಗಳಾಗಿವೆ. ಇವುಗಳಲ್ಲಿ ಚರಾಸ್ಥಿಯ ಮೌಲ್ಯ 10.12 ಕೋಟಿ ರೂ.ಗಳಾದರೆ, ಸ್ಥಿರಾಸ್ಥಿಗಳ ಒಟ್ಟು ಮೌಲ್ಯ 19.37 ಕೋಟಿ ರೂ. ಗಳಾಗಿವೆ.
ಸುರೇಶ್ ಶೆಟ್ಟಿ ಅವರ ಪತ್ನಿ ವಿಜಯಾ ಶೆಟ್ಟಿ ಅವರಲ್ಲಿ 1.54 ಕೋಟಿ ರೂ.ಚರಾಸ್ಥಿ ಇದೆ. ಅದೇ ರೀತಿ ಮಗ ಸೌರಬ್ ಶೆಟ್ಟಿ ಬಳಿ 2.18 ಕೋಟಿ ರೂ.ಚರಾಸ್ಥಿ ಹಾಗೂ 299 ಕೋಟಿ ರೂ. ಸ್ಥಿರಾಸ್ಥಿಯಿದೆ. ವಿವಿಧ ಬ್ಯಾಂಕುಗಳು ಹಾಗೂ ಆರ್ಥಿಕ ಸಂಸ್ಥೆಗಳಲ್ಲಿ ಸುರೇಶ್ ಶೆಟ್ಟಿ ಅವರಿಗೆ 1.49 ಕೋಟಿ ರೂ.ಸಾಲವಿದ್ದರೆ, ಮಗನ ಹೆಸರಿನಲ್ಲಿ 99.97 ಲಕ್ಷರೂ. ಸಾಲವಿದೆ.
ಸುರೇಶ್ ಶೆಟ್ಟಿ ಅವರ ವಿರುದ್ಧ ಕಾರವಾರ ನಗರ, ಬೆಂಗಳೂರಿನ ವಿಶೇಷ ತನಿಖಾ ತಂಡ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ಉತ್ತರ ರೇಂಜ್‌ನಲ್ಲಿ 2010, 2015ರಲ್ಲಿ ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳು ಕಬ್ಬಿಣದ ಅದಿರಿನ ಅಕ್ರಮ ಸಾಗಾಟ ಹಾಗೂ ಅಕ್ರಮ ಗಣಿಗಾರಿಕೆ ಮತ್ತು ತ್ಯಾಜ್ಯವನ್ನು ಅಕ್ರಮವಾಗಿ ಎಸೆದಿರುವುದಕ್ಕೆ ಸಂಬಂಧಿಸಿದ್ದಾಗಿದೆ ಎಂದು ಅಫಿದಾವತ್‌ನಲ್ಲಿ ತಿಳಿಸಲಾಗಿದ್ದು, ಯಾವುದೇ ಪ್ರಕರಣಗಳ ಬಗ್ಗೆ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿಲ್ಲ ಎಂದು ಹೇಳಲಾಗಿದೆ.