ಪಡುಬಿದ್ರಿ ಪೊಲೀಸರ ಕಾರ್ಯಾಚರಣೆ: ಲಕ್ಷಾಂತರ ರೂ. ಮೌಲ್ಯದ ವಿವಿಧ ಸಿಗರೇಟ್‌ಗಳು ವಶಕ್ಕೆ

ಉಡುಪಿ: ವಿಧಾನಸಭಾ ಚುನಾವಣೆ ನಿಮಿತ್ತ ಮಣಿಪಾಲ ಹಾಗೂ ಪಡುಬಿದ್ರಿ ಪೊಲೀಸರು ಕಾರ್ಯಾಚರಣೆ ನಡೆಸಿ 6.34 ಲ.ರೂ.ಮೌಲ್ಯದ ವಿವಿಧ ಸಿಗರೇಟ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಎ.17ರಂದು ಕಾಪು ವಿಧಾನಸಭಾ ಕ್ಷೇತ್ರದ ಹೆಜಮಾಡಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಯಾವುದೇ ದಾಖಲೆ ಇಲ್ಲದೆ 4,79,970 ರೂ.ಮೌಲ್ಯದ ಸಿಗರೇಟ್‌ ಬಂಡಲ್‌ಗ‌ಳು ಮತ್ತು ಇ-ಸಿಗರೇಟ್‌, ಸಾಗಾಟಕ್ಕೆ ಉಪಯೋಗಿಸಿದ ಕಾರು ಮತ್ತು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎ.18ರಂದು ಅಕ್ರಮವಾಗಿ ಇ ಸಿಗರೇಟ್‌ ಸಂಗ್ರಹ ಹಾಗೂ ವಿದೇಶಿ ಕಂಪೆನಿಯ ಸಿಗರೇಟ್‌ಗಳನ್ನು ಎಂಆರ್‌ಪಿ ದರ ನಮೂದಿಸದೇ ಕೋಟಾ³ ಕಾಯ್ದೆ ಉಲ್ಲಂ ಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಮಣಿಪಾಲದಲ್ಲಿನ ಶೀಶಾ ಪ್ಯಾರಡೈಸ್‌ ಮತ್ತು ಸ್ಮೋಕ್‌ ಕೋ ಎಂಬ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಎರಡೂ ಅಂಗಡಿಗಿಂದ ಸುಮಾರು 1,50,000ರೂ.ಮೌಲ್ಯದ 113 ವಿವಿಧ ಕಂಪೆನಿಯ ನಿಷೇಧಿತ ಇ-ಸಿಗರೇಟ್‌ಗಳು ಹಾಗೂ 5 ಸಾವಿರ ರೂ.ಮೌಲ್ಯದ ವಿದೇಶಿ ಕಂಪೆನಿಯ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1,55,000 ರೂ.ಆಗಿದೆ. ಶೀಶಾ ಪ್ಯಾರಡೈಸ್‌ ಅಂಗಡಿ ಮಾಲಕ ಅನ್ಸಾರ್‌ ಹಾಗೂ ಸ್ಮೋಕ್‌ ಕೋ ಅಂಗಡಿ ಮಾಲಕ ಮುಫೀನ್‌ ವಿರುದ್ದ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Scroll to Top