ಭಟ್ಕಳ: ಮುಸ್ಲಿಂ ಯುವತಿಗೆ ಹಿಂದೂ ಯುವಕರಿಂದ ಲೈಂಗಿಕ ದೌರ್ಜನ್ಯ ಆರೋಪ : 7 ಜನರ ವಿರುದ್ಧ ದೂರು ದಾಖಲು

ಉತ್ತರ ಕನ್ನಡ: ಭಟ್ಕಳದಲ್ಲಿ ಮುಸ್ಲಿಂ ಯುವತಿಗೆ ಹಿಂದೂ ಯುವಕರಿಂದ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಿನ್ನೆ(ಏ.20) ಜಿಲ್ಲೆಯ ಭಟ್ಕಳ ನಗರದ ರಂಜಾನ್ ಮಾರ್ಕೆಟ್ನಿಂದ ಆಟೋದಲ್ಲಿ ತೆರಳಲು ಮುಸ್ಲಿಂ ಯುವತಿ ಆಟೋ ಹತ್ತಿದ್ದಾಳೆ. ಈ ವೇಳೆ ಅಲ್ಲಿಯೇ ಆಟೋ ನಿಲ್ದಾಣದ ಬಳಿಯಿದ್ದ ಕೆಲವು ಯುವಕರು ಯುವತಿಗೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ.‌ ಇದನ್ನ ಗಮನಿಸಿದ ಸ್ಥಳೀಯರು ಬುದ್ದಿವಾದ ಹೇಳಿದ್ದಾರೆ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಯುವಕರನ್ನ ಬಂಧಿಸಿ ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ. ಹೀಗೆ ಹೋಗುವ ವೇಳೆ ಮುಸ್ಲಿಂ ಯುವಕರು ಆಕ್ರೋಶದಿಂದ ಕಲ್ಲು ತೂರಾಟ ಮಾಡಿದ್ದಾರೆ.

ಈ ಕುರಿತು ಭಟ್ಕಳ ಶಹರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಈ ಘಟನೆ ಸಂಬಂಧ ಇಬ್ಬರು ಹಿಂದೂ ಯುವಕರು ಸೇರಿ ಏಳು ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಹದ್ಲೂರು ನಿವಾಸಿ ಚಂದ್ರು ಗೊಂಡ, ಸರ್ಪನಕಟ್ಟೆಯ ರವೀಂದ್ರ ನಾಯ್ಕ್ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.

ಜೊತೆಗೆ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಸುಲ್ತಾನ್ ಸ್ಟ್ರೀಟ್ನ ಮೊಹ್ಮದ್ ಮೀರಾ,ಮೊಹ್ಮದ್ ಇಮ್ರಾನ್ ಶೇಖ್ ಸೇರಿ ಐವರ ವಿರುದ್ದ ಸಹ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top