ಮತದಾರರಿಗೆ ಭರ್ಜರಿ ಆಫರ್; ಸಚಿವ ಮುರುಗೇಶ್ ನಿರಾಣಿ ಫೋಟೋ ಇರುವ 27kg ಬೆಳ್ಳಿ ಹಣತೆಗಳು ಜಪ್ತಿ

ಬಾಗಲಕೋಟೆ, ಏ.22: ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಮತದಾರರಿಗೆ ಹಂಚಲು ಇಟ್ಟಿದ್ದ ಬರೋಬ್ಬರಿ 27kg 867 ಗ್ರಾಂ ಬೆಳ್ಳಿಯ ಹಣತೆಗಳನ್ನ ಜಪ್ತಿ ಮಾಡಲಾಗಿದೆ.

ಮುಧೋಳ ತಹಶೀಲ್ದಾರ್, ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್, ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ವೇಳೆ 21 ಲಕ್ಷ 45 ಸಾವಿರ ಮೌಲ್ಯದ ಒಟ್ಟು 27 ಕೆಜಿ 867 ಗ್ರಾಂ ಬೆಳ್ಳಿ ಹಣತೆಗಳನ್ನ ಜಪ್ತಿ ಮಾಡಲಾಗಿದೆ.

ಬೆಳ್ಳಿ ಹಣತೆಗಳ ತಳಭಾಗದಲ್ಲಿ ಸಚಿವ ಮುರುಗೇಶ್ ನಿರಾಣಿ ಭಾವಚಿತ್ರಗಳು ಇವೆ. ಮುರುಗೇಶ್ ನಿರಾಣಿ ಅವರು ಬೀಳಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಒಟ್ಟು 10 ಬಾಕ್ಸ್‌ಗಳಲ್ಲಿ ಈ ಬೆಳ್ಳಿ ದೀಪಗಳನ್ನ ತುಂಬಿ ಇಡಲಾಗಿತ್ತು.

ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಜೀವನ್ ಮಾನೆ ಅವರು ದೂರು ನೀಡಿದ್ದು, ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಧೋಳ ನಗರದ ನಿರಾಣಿ ಸಕ್ಕರೆ ಕಾರ್ಖಾನೆ ವಸತಿ ಗೃಹಗಳಲ್ಲಿ ಈ ಬಾಕ್ಸ್‌ಗಳನ್ನು ಸಂಗ್ರಹಿಸಿಟ್ಟಿರುವ ಆರೋಪ ಕೇಳಿ ಬಂದಿದೆ.

Scroll to Top