ಬ್ರಹ್ಮಾವರ : ಮರುವಾಯಿ ಹಿಡಿಯಲು ಹೋಗಿ ನಾಲ್ವರು ಯುವಕರು ನೀರುಪಾಲು..!!

ಬ್ರಹ್ಮಾವರ: ನದಿಯಲ್ಲಿ ಮರುವಾಯಿ ಅಥವಾ ಕಪ್ಪೆಚಿಪ್ಪು ಹೆಕ್ಕಲು ಹೋಗಿ ನಾಲ್ವರು ಯುವಕರು ನೀರುಪಾಲಾದ ಘಟನೆ ಕುಕ್ಕುಡೆಕುದ್ರು ಬಳಿ ರವಿವಾರ ಸಂಜೆ ಸಂಭವಿಸಿದೆ.

ಮೃತರನ್ನು ಹೂಡೆಯ ಪೈಸಾನ್‌, ಇಬಾದ್‌ ಹಾಗೂ ಅವರ ಸಂಬಂಧಿಕರಾದ ತೀರ್ಥಹಳ್ಳಿಯ ಈರ್ವರು ಎನ್ನಲಾಗಿದೆ.

ಈದ್ ಹಿನ್ನೆಲೆಯಲ್ಲಿ ಶೃಂಗೇರಿಯ ಯುವಕರು ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಸಂಜೆ ಒಟ್ಟು ಏಳು ಮಂದಿ ನದಿಯಿಂದ ಮರುವಾಯಿ ಸಂಗ್ರಹಿಸುವ ಉದ್ದೇಶದಿಂದ ಹೂಡೆಯ ಗುಡ್ಡೇರಿ ಕಂಬಳದಿಂದ ಕುಕ್ಕುಡೆ ಕುದ್ರುವಿಗೆ ದೋಣಿಯಲ್ಲಿ ತೆರಳಿದ್ದರು. ಈ ಸಂದರ್ಭ ನಾಲ್ವರು ನೀರಿನಲ್ಲಿ ಮುಳುಗಿ ಪತ್ತೆಯಾಗಿದರೆನ್ನಲಾಗಿದೆ. ಈ ಪೈಕಿ ಮೂವರು ಈಜಿ ಕುದ್ರು ಸೇರಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರವಿವಾರ ಜೋರಾದ ಗಾಳಿ ಬೀಸುತ್ತಿದ್ದುದರಿಂದ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ. ಯುವಕರ ಗುಂಪಿನ ಕಿರುಚಾಟ ಕೇಳಿ ಸ್ಥಳೀಯರಿಗೆ ವಿಚಾರ ತಿಳಿದಿದೆ. ಮೂವರು ಈಜಿಕೊಂಡು ದಡ ಸೇರಿದ್ದಾರೆ. ಬ್ರಹ್ಮಾವರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

You cannot copy content from Baravanige News

Scroll to Top