ಮಲ್ಪೆ: ಎರಡು ಮೊಬೈಲ್ ಅಂಗಡಿಗಳಲ್ಲಿ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ಕಳವುಗೈದ ಖದೀಮರು

ಮಲ್ಪೆ ಎ.25: ಇಲ್ಲಿನ ಅಯ್ಯಪ್ಪ ಮಂದಿರದ ಬಳಿ ಇರುವ ಎರಡು ಮೊಬೈಲ್ ಅಂಗಡಿಗಳಲ್ಲಿ ಒಟ್ಟು 1.20 ಲಕ್ಷ ರೂ. ಮೌಲ್ಯದ ಸೊತ್ತುಗಳು ಕಳವಾಗಿರುವ ಘಟನೆ ನಡೆದಿದೆ.

ಮಲ್ಪೆಯ ಅಯ್ಯಪ್ಪ ಮಂದಿರದ ಬಳಿ ಇರುವ ಉಡುಪಿಯ ಉದ್ಯಾವರದ ರಮೇಶ್ ಸುದರ್ಶನ್

ಎಂಬವರಿಗೆ ಸೇರಿದ ಶ್ರೀ ಸಿದ್ಧಿವಿನಾಯಕ ಮೊಬೈಲ್ ಶಾಪ್‌ನಲ್ಲಿ ಕಳ್ಳತನ ನಡೆದಿದೆ. ಇವರ ಮೊಬೈಲ್

ಅಂಗಡಿಯ ಮುಖ್ಯ ಶೆಟ್ಟರೀನ್ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿಯ ಒಳಗೆ ಹೋಗಿ

1,09,371 ರೂ. ಮೌಲ್ಯದ ಸುತ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.

ಇದೇ ವೇಳೆ ಅಲ್ಲೇ ಸಮೀಪದಲ್ಲಿರುವ ಉಳ್ಳೂರು ಗ್ರಾಮದ ಪ್ರಸಾದ್ ಎಂಬವರಿಗೆ ಸೇರಿದ SMART.COM MOBILE SHOP ನಲ್ಲಿಯೂ ಕಳ್ಳತನ ನಡೆಸಿದ್ದು ಕಳ್ಳರು 11,187 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ.

ಈ ಎರಡೂ ಘಟನೆಗೆ ಸಂಬಂಧಿಸಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top