ಬೆಂಗಳೂರು, ಏ 27: ರಾಜ್ಯದಲ್ಲಿ ಚುನಾವಣೆಗೆ ಅಂತಿಮ ಹಂತದ ತಯಾರಿ ನಡೆಸುತ್ತಿರುವ ಆಯೋಗವು ಇದೀಗ ಮತದಾರರಿಗೆ ಅನುಕೂಲವಾಗುವಂತೆ ಮತದಾನದ ಸಮಯವನ್ನು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ.
ಪ್ರತಿ ಚುನಾವಣೆಗೆ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನವಿರುತ್ತದೆ. ಆದರೆ ಈ ಬಾರಿ ಅಧಿಕ ಬಿಸಿಲಿನ ವಾತಾವರಣ ಇರುವುದರಿಂದ ಮತದಾರರಿಗೆ ಅನುಕೂಲವಾಗುವಂತೆ ಒಂದೂವರೆ ತಾಸು ಸಮಯ ಹೆಚ್ಚಳ ಮಾಡಿದೆ.
ಆ ಪ್ರಕಾರ ಬೆಳಗ್ಗೆ 7ರಿಂದ ಸಂಜೆ 6.30ರವರೆಗೆ ಮತದಾನ ಅವಧಿಯಾಗಿರುತ್ತದೆ. ಒಂದೇ ಹಂತದಲ್ಲಿ ಮೇ10ರಂದು ಮತದಾನ ನಡೆಯಲಿದೆ.